*ಗಾಯಾಳುಗಳಿಗೆ ನೆರವಾದ ದೇಶದ ಯೋಧರು*
ಕುಮಟಾ : ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಇರ್ವರನ್ನು ಯೋಧರು ತಮ್ಮ ಕರ್ತವ್ಯದಲ್ಲಿಯೇ ಆಸ್ಪತ್ರೆಗೆ ಸಾಗಿಸಿ ಮಾನವಿಯತೆ ಮೆರೆದಿದ್ದಾರೆ
ಶನಿವಾರ ಮಧ್ಯಾಹ್ನ 4.20 ರ ಸುಮಾರಿಗೆ ಕುಮಟಾದಿಂದ ದಿವಗಿ ಕಡೆ ಹೊರಟ ಆಟೋರಿಕ್ಷಾ ಹಾಗೂ ಕಾರವಾರ ಕಡೆಯಿಂದ ಕುಮಟಾ ಕಡೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದಿದ್ದು ಅಫಘಾತ ದಲ್ಲಿ ರಿಕ್ಷಾ ಚಾಲಕ ಪ್ರಶಾಂತ ದೇಶಭಂಡಾರಿ ಎರಡೂ ಕಾಲಿಗೆ ಹಾಗೂ ಪ್ರಯಾಣಿಸುತ್ತಿದ್ದ ಸಂಗೀತಾ ದೇಶಭಂಡಾರಿ ತಲೆಗೆ ತೀವೃವಾಗಿ ಗಾಯಗೊಂಡಿದ್ದರು. ಅದೇ ಸಮಯಕ್ಕೆ ಅಫಘಾತ ಸ್ಥಳದಲ್ಲಿ ಸುಮೋದಲ್ಲಿ ಪ್ರಯಾಣಿಸುತ್ತಿದ್ದ ಚುನಾವಣಾ ಕರ್ತವ್ಯ ನಿರತ ದೇಶದ BSF ಯೋಧರ ತಂಡ ಗಾಯಗೊಂಡವರನ್ನು ಗಮನಿಸಿ ತಕ್ಷಣ ವಾಹನ ನಿಲ್ಲಿಸಿ ಅವರಿಬ್ಬರನ್ನೂ ತಮ್ಮ ವಾಹನದಲ್ಲಿ ಹಾಕಿಕೊಂಡು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ಕಳುಹಿಸುವಲ್ಲಿ ನೆರವಾದರು..
*ತಮ್ಮ ಜೀವದ ಹಂಗನ್ನು ತೊರೆದು ದೇಶವನ್ನು ರಕ್ಷಿಸುವ ಯೋಧರು ಆಪತ್ಕಾಲದಲ್ಲಿ ತಮ್ಮ ಕರ್ತವ್ಯ ನಿರ್ವಹಣೆ ಜೊತೆ ಇನ್ನೊಬ್ಬರ ಜೀವ ರಕ್ಷಿಸಲೂ ನೆರವಾಗುತ್ತಾರೆ.. ನಿಜವಾಗಿ ಇವರು ಕಣ್ಣಿಗೆ ಕಾಣುವ ದೇವರು.. ಯೋಧರಿಗೊಂದು ಹ್ಯಾಟ್ಸಫ್..*