ಚಿಕ್ಕಬಳ್ಳಾಪುರ: ಆಸ್ತಿಯಲ್ಲಿ ತಂದೆ ತನಗೆ ಕಡಿಮೆ ಪಾಲು ಕೊಟ್ಟಿದ್ದಾರೆಂದು ರೊಚ್ಚಿಗೆದ್ದ ದುಷ್ಟ ಮಗನೊಬ್ಬ ಕಲ್ಲಿನಿಂದ ತಂದೆಯ ತಲೆ ಹಾಗೂ ಮರ್ಮಾಗಕ್ಕೆ ಹೊಡೆದು ಹತ್ಯೆ ಮಾಡಿರುವ ಭೀಕರ ಘಟನೆ ನಡೆದಿದೆ.
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಮುತ್ತಾವಲಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಆದಿ ನಾರಾಯಣಪ್ಪ ಎಂಬವರನ್ನು ಅವರ ಮಗ ರಾಮಮೂರ್ತಿ ಹತ್ಯೆ ಮಾಡಿದ್ದಾನೆ. ಆಸ್ತಿ ವ್ಯಾಜ್ಯವೇ ಈ ಹತ್ಯೆಗೆ ಕಾರಣವೆಂದು ಹೇಳಲಾಗಿದೆ.
ಆದಿ ನಾರಾಯಣಪ್ಪನಿಗೆ ಸರೋಜಮ್ಮ ಹಾಗೂ ಅಶ್ವತ್ಥಮ್ಮ ಎಂಬ ಇಬ್ಬರು ಪತ್ನಿಯರಿದ್ದು, ಮೊದಲ ಪತ್ನಿಯ ಮಕ್ಕಳಿಗೆ ಆಸ್ತಿಯಲ್ಲಿ ಹೆಚ್ಚು ಪಾಲು ನೀಡಿದ್ದ ಆದಿ ನಾರಾಯಣಪ್ಪ ಎರಡನೇ ಪತ್ನಿಯ ಮಗ ರಾಮಮೂರ್ತಿಗೂ ಕಡಿಮೆ ಆಸ್ತಿ ನೀಡಿದ್ದರೆಂದು ಹೇಳಲಾಗಿದೆ. ಇದರಿಂದ ರೊಚ್ಚಿಗೆದ್ದ ರಾಮಮೂರ್ತಿ ಸೋಮವಾರ ರಾತ್ರಿ ಈ ಕೃತ್ಯವೆಸಗಿದ್ದಾನೆ.