ಡಾ.ಜಿ.ಪರಮೇಶ್ವರ್ ಸ್ಥಾನಕ್ಕೆ ಕುತ್ತು?: ಉಪ ಮುಖ್ಯಮಂತ್ರಿ ಹುದ್ದೆ ರದ್ದು ಕೋರಿ ಕೋರ್ಟ್ನಲ್ಲಿ ಅರ್ಜಿ

ಬೆಂಗಳೂರು: ಉಪಮುಖ್ಯಮಂತ್ರಿ ಸ್ಥಾನ ಎಂಬುದು ಸಂವಿಧಾನದ ಪ್ರಕಾರ ಕಾನೂನು ಬಾಹಿರವಾಗಿದ್ದು, ಹುದ್ದೆ ರದ್ದು ಮಾಡಬೇಕೆಂದು ಮೈಸೂರಿನ ಶೇಖರ್ ಅಯ್ಯರ್ ಎಂಬುವವರು ಹೈಕೋರ್ಟ್ನಲ್ಲಿ ಈ ವಿಚಾರವಾಗಿ ಪಿಐಎಲ್ ಸಲ್ಲಿಸಿದ್ದಾರೆ.
ಇದೇ ವೇಳೆ ಅವರು ತಮ್ಮ ಅರ್ಜಿಯಲ್ಲಿ ಡಾ.ಜಿ. ಪರಮೇಶ್ವರ್ ಅವರು ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿ ಸಂವಿಧಾನಕ್ಕೆ ಅಪಚಾರ ಮಾಡಿದ್ದಾರೆ. ಹಾಗಾಗಿ ಈ ಹುದ್ದೆಯನ್ನು ಕಾನೂನು ಬಾಹಿರವೆಂದು ಘೋಷಿಸಬೇಕು,” ಇದಲ್ಲದೇ ಸಂವಿಧಾನದಲ್ಲಿ ಉಪಮುಖ್ಯಮಂತ್ರಿ ಹುದ್ದೆಯ ಪ್ರಸ್ತಾಪವಿಲ್ಲ. ಡಿಸಿಎಂ ಆಗಿ ಪ್ರತಿಜ್ಞಾವಿಧಿ ಸ್ವೀಕಾರಿಸುವುದು ಸಂವಿಧಾನ ಬಾಹಿರ ಅಂತ ದೂರಿದ್ದಾರೆ.