ಬೆಂಗಳೂರು. ಜೂ.01 : ಬಹುನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆ ಬುಧವಾರ ನಡೆಯಲಿದ್ದು, ಮೊದಲು ಹಂತದಲ್ಲಿ ಎರಡು ಪಕ್ಷಗಳಿಂದ ತಲಾ ಐದು ಮಂದಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ‌. ಬುಧವಾರ ಮಧ್ಯಾಹ್ನ 2 ಗಂಟೆಗೆ ರಾಜಭವನದ ಗಾಜಿನ ಅರಮನೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲ ವಿ.ಆರ್. ವಾಲಾ ಅವರು ನೂತನ ಸಚಿವರಾಗಿ ಅಧಿಕಾರ ಗೌಪ್ಯತೆ ಬೋಧಿಸಲಿದ್ದಾರೆ. ಇಂದು (ಶುಕ್ರವಾರ) ಬೆಂಗಳೂರಿನ ಖಾಸಗಿ ಹೊಟೇಲ್ ನಲ್ಲಿ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಮತ್ತಿತರರು ಸಚಿವ ಸಂಪುಟ ವಿಸ್ತರಣೆಯ ವಿವರಗಳನ್ನು ನೀಡಿದರು.

ಕಾಂಗ್ರೆಸ್ ಗೆ ಹಂಚಿಕೆಯಾಗಿರುವ ಖಾತೆಗಳು :
ಗೃಹ, ನೀರಾವರಿ, ಬೆಂಗಳೂರು ನಗರಾಭಿವೃದ್ಧಿ, ಕೈಗಾರಿಕೆ ಮತ್ತು ಸಕ್ಕರೆ ಕೈಗಾರಿಕೆ, ಆರೋಗ್ಯ, ಕಂದಾಯ, ಮುಜರಾಯಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಕೃಷಿ, ವಸತಿ, ವೈದ್ದ್ಯಕೀಯ ಶಿಕ್ಷಣ, ಸಮಾಜ ಕಲ್ಯಾಣ, ಪರಿಸರ ಮತ್ತು ಅರಣ್ಯ , ಕಾರ್ಮಿಕ, ಗಣಿ ಮತ್ತು ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆಹಾರ ಮತ್ತು ನಾಗರಿಕ ಸರಬರಾಜು, ಹಜ್, ಅಲ್ಪಸಂಖ್ಯಾತರ ಕಲ್ಯಾಣ , ಕಾನೂನು ಮತ್ತು ಸಂಸದೀಯ ವ್ಯವಹಾರ, ಗಣಿ ಮತ್ತು ಭೂ ವಿಜ್ಞಾನ, ಐಟಿಬಿಟಿ, ಕ್ರೀಡೆ, ಯುವಜನೆಸೇವೆ, ಕನ್ನಡ ಮತ್ತು ಸಂಸ್ಕೃತಿ, ಒಳನಾಡು ಸಾರಿಗೆ

ಜೆಡಿಎಸ್ ಗೆ ಹಂಚಿಕೆಯಾಗಿರುವ ಖಾತೆಗಳು :
ಮಾಹಿತಿ ತಂತ್ರಜ್ಞಾನ , ಆಡಳಿತ ಸುಧಾರಣೆ, ಗುಪ್ತಚರ ಇಲಾಖೆ, ಯೋಜನೆ ಮತ್ತು ಸಾಂಖ್ಯಿಕ, ಹಣಕಾಸು , ಅಬಕಾರಿ , ಲೋಕೋಪಯೋಗಿ, ಇಂಧನ, ಸಹಕಾರ, ಪ್ರವಾಸೋದ್ಯಮ , ಶಿಕ್ಷಣ, ಪಶುಸಂಗೋಪನೆ , ಮೀನುಗಾರಿಕೆ , ತೋಟಗಾರಿಕೆ ,ರೇಷ್ಮೆ , ಸಣ್ಣ ಕೈಗಾರಿಕೆ, ಸಾರಿಗೆ , ಸಣ್ಣ ನೀರಾವರಿ,