೩೩ ಕುಂದಾಪುರದಿಂದ ಸುಮಾರು ೧೬ ಕಿ. ಮೀ. ದೂರದಲ್ಲಿದೆ ಈ ಊರು. ಕೊಲ್ಲೂರಿಗೆ ಹತ್ತಿರ. ಇಲ್ಲಿನ ಪ್ರಸಿದ್ಧ ದೇವಾಲಯ ಶ್ರೀ ಬ್ರಹ್ಮ ಲಿಂಗೇಶ್ವರ ದೇವಸ್ಥಾನ. ಕೊಲ್ಲೂರ ಮಾತೆ ಶ್ರೀ ದೇವಿ ಮುಕಾಂಬಿಕೆ ಮತ್ತು ಬ್ರಹ್ಮಲಿಂಗೇಶ್ವರ ರದ್ದು ತಾಯಿ – ಮಗನ ಭಾಂದವ್ಯ ಎನ್ನುತ್ತಾರೆ.
ದೇವಾಲಯದ ಸುತ್ತಮುತ್ತ ಕಾಡುಗುಡ್ಡಗಳಿದ್ದು ಪಕ್ಕದಲ್ಲಿ ಬ್ರಹ್ಮಕುಂದ ಹರಿಯುತ್ತಿದೆ. ಸ್ಕಂದ ಪುರಾಣದಲ್ಲಿ ಮೂಕಾಸುರನನ್ನು ಶ್ರೀ ಮುಕಾಂಬಿಕೆ ದೇವಿ ವಧಿಸಿದ ನಂತರ ಶ್ರೀ ಬ್ರಹ್ಮಲಿಂಗೇಶ್ವರನ ನೆಲೆಯಾಯಿತೆಂದು ಹೇಳಲಾಗಿದೆ.
ಮಲಯಾಳಿ ಯಕ್ಷಿ ,ಉಲ್ಲಾಳ ಚಿಕ್ಕು , ವಟ ಯಕ್ಷಿ ಮತ್ತು ಇಬ್ಬರು ದ್ವಾರ ಪಾಲಕರನ್ನು ನಾವಿಲ್ಲಿ ಕಾಣುತ್ತೇವೆ.
ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರಿಂದ ಸ್ಥಾಪಿತ ‘ಶ್ರೀ ಚಕ್ರ ಯಂತ್ರ ‘ ಇಲ್ಲಿದೆ.
ಜನವರಿ ತಿಂಗಳ ೧೪ -೧೫ -೧೬ ರಂದು ಇಲ್ಲಿ ಜಾತ್ರೆ. ಘಟ್ಟದ ಮೇಲಿಂದ , ದೂರದೂರಿಂದ ಜನ ಆಗಮಿಸುತ್ತಾರೆ. ಬುಟ್ಟಿ ಹೂ ಅರ್ಪಣೆ , ರಂಗಪೂಜೆ ,ಹಾಲು ಹಬ್ಬ , ಚರುವಿನ ಸೇವೆ ಇಲ್ಲಿನ ವಿಶೇಷ. ಹಿಂದುಗಳು ಮಾತ್ರವಲ್ಲ ಮುಸ್ಲಿಂ ಕ್ರಿಶ್ಚಿಯನ್ನರು ಇಲ್ಲಿಗೆ ಆಗಮಿಸುತ್ತಾರೆ. ಇಲ್ಲಿ ದೈವದ ಮನೆಯಿದ್ದು ಹಾಯ್ಗುಳಿ ಮತ್ತು ಶ್ರೀ ಹುಲಿದೇವರ ಆರಾಧನೆ ನಡೆಯುತ್ತದೆ.
ಇಲ್ಲಿ ಎರಡು ಯಕ್ಷಗಾನ ಮೇಳವಿದ್ದು ಹರಕೆ ಯಕ್ಷಗಾನ ನಡೆಯುತ್ತದೆ
ಇಷ್ಟೆಲ್ಲಾ ವಿಶೇಷತೆ ಇರುವ ಈ ಕ್ಷೇತ್ರ * ಶ್ರೀ ಕ್ಷೇತ್ರ ಮಾರಣಕಟ್ಟೆ *