೨೭. ಕುಂದಾಪುರದಿಂದ ಸುಮಾರು ೨೫ ಕಿ.ಮೀ. ದೂರದಲ್ಲಿದೆ ಈ ಊರು. ಸ್ಕಂದ ಪುರಾಣದಲ್ಲಿ ಉಲ್ಲೇಖವಾಗಿರುವ ಪರಶುರಾಮ ಸ್ರಷ್ಟಿಯ ಸಪ್ತ ಕ್ಷೇತ್ರಗಳಲ್ಲಿ ಒಂದು. ಕ್ರೋಢ ಎನ್ನುವ ಋಷಿವರ್ಯರು ಇಲ್ಲಿ ತಪ್ಪಸ್ಸನ್ನಾಚರಿಸುತ್ತಿದ್ದರಂತೆ- ಹೀಗಾಗಿ ‘ಕ್ರೋಢ ‘ ಕ್ಷೇತ್ರವೆಂದು ಈ ಸ್ಥಳವನ್ನು ಹಿಂದೆ ಕರೆಯಲಾಗುತ್ತಿತ್ತಂತೆ.
‘ಗೋಳಿ ಕಟ್ಟೆ ‘ ಎಂದು ಕೂಡಾ ಈ ಊರನ್ನು ಕರೆಯುತ್ತಿದ್ದರಂತೆ. ಈ ಊರಿನಲ್ಲಿರುವ ಪ್ರಸಿದ್ಧ ದೇವಾಲಯದಲ್ಲಿ ಶಿವ ಮತ್ತು ವಿಷ್ಣು ದೇವರುಗಳ ಉದ್ಭವ ಲಿಂಗಗಳಿವೆ .ಮತ್ತು ಪೂಜೆ ಒಂದೇ ಗರ್ಭ ಗುಡಿಯಲ್ಲಿ ನಡೆಯುತ್ತದೆ. ಶಿವರೂಪಿ ಲಿಂಗದ ನೆತ್ತಿ ಗೋಲಾಕಾರವಾಗಿದ್ದರೆ, ವಿಷ್ಣುರೂಪಿ ಲಿಂಗದ ನೆತ್ತಿ ಸಮತಟ್ಟಾಗಿದೆ. ಉದ್ಭವ ಲಿಂಗದ ಸುತ್ತ ಸಿದ್ಧಾಮ್ರತ ತೀರ್ಥವಿದ್ದು ,ಬಲಭಾಗದಲ್ಲಿ ಭಾರ್ಗವ ತೀರ್ಥ ಹಾಗೂ ಮುಂಭಾಗದಲ್ಲಿ ಕೋಟಿ ತೀರ್ಥವಿದೆ. ವಿಜಯ ನಗರ , ಕೆಳದಿ ,ಇಕ್ಕೇರಿ ಅರಸರಿಂದ ಪೋಷಿಸಲ್ಪಟ್ಟಿದ್ದ ಈ ದೇವಾಲಯದಲ್ಲಿ ೬೦೦ ಕೆ.ಜಿ. ಭಾರದ ಆರು ಕುಣಿಕೆಗಳ ಘಂಟೆ ಇದೆ. ಈ ಘಂಟೆಯನ್ನು ಟಿಪ್ಪು ಸುಲ್ತಾನ್ ನೀಡಿದ್ದೆಂದು ಹೇಳಲಾಗುತ್ತಿದೆ. ಕಾಷ್ಟ ಶಿಲ್ಪ ಕೆತ್ತನೆಯ ವೈಭವದ ಆರು ಚಕ್ರಗಳ ರಥವಿದೆ.
(ಚಿತ್ರ ಮತ್ತು ಮಾಹಿತಿ : ಸಂಗ್ರಹ )
( ಕಣ್ತಪ್ಪಿನಿಂದ ಚಿತ್ರ ಬದಲಾಗಿದ್ದರೆ ಕ್ಷಮಿಸಿ )

ಪ್ರಶ್ನೆ : ಶಿವ ಮತ್ತು ವಿಷ್ಣುವಿನ ಹೆಸರು ಒಂದಾಗಿ ಆ ಊರಿನ ಹೆಸರಿನ ರಚನೆಯಾಗಿದೆ ಶ್ರೀ ಕ್ಷೇತ್ರ ಶಂಕರನಾರಾಯಣ