ರುವಾಂಡಾ ಜೈಲಿನಲ್ಲಿ ನುಷ್ಯರನ್ನು ತಿಂದ ನಂತರ ಉಳಿದ ಮೂಳೆಗಳನ್ನು ಜೋಡಿಸುತ್ತಿರುವುದು

ರುವಾಂಡಾ ಜೈಲಿನಲ್ಲಿ ನುಷ್ಯರನ್ನು ತಿಂದ ನಂತರ ಉಳಿದ ಮೂಳೆಗಳನ್ನು ಜೋಡಿಸುತ್ತಿರುವುದು

ಮನುಷ್ಯರು ಸಿಕ್ಕ ಸಿಕ್ಕ ಪ್ರಾಣಿಗಳನ್ನು ಕೊಂದು ತಿನ್ನುವುದರ ಕುರಿತಾಗಿ ನೋಡಿದ್ದೀರಿ, ಕೇಳಿದ್ದೀರಿ. ಆದರೆ ಮನುಷ್ಯರೇ ಮನುಷ್ಯರನ್ನು ಕಿತ್ತು ತಿನ್ನುವ ಮೂಲಕ ತಾವು ಬದುಕುತ್ತಾರೆ.
ಹೌದು. ರುವಾಂಡಾದ ಗಿಟಾರೆಮಾ ಜೈಲಿನಲ್ಲಿ ಈ ಭಯಾನಕ ಘಟನೆ ನಡೆಯುತ್ತಿದ್ದು 600 ಕೈದಿಗಳನ್ನು ಬಂಧಿಸಿಡಬಹುದಾದ ಈ ಬಂಧೀಖಾನೆಯಲ್ಲಿ ಆರರಿಂದ ಏಳು ಸಾವಿರ ಕೈದಿಗಳಿದ್ದು ಪ್ರತಿ ನಿತ್ಯವೂ ಹೊಡೆದಾಡಿಕೊಂಡು ಪರಸ್ಪರರನ್ನು ಕೊಂದು ಅವರ ಮಾಂಸವನ್ನೇ ತಿಂದು ಬದುಕುತ್ತಿದ್ದಾರೆ.
ಈ ಬಂಧೀಖಾನೆಯೊಳಗೆ ಕೈದಿಗಳು ದಿನವಿಡೀ ನಿಂತೇ ಇರುವ ಪರಿಸ್ಥಿತಿ ಇದ್ದು, ಸದಾ ದುರ್ನಾತದಿಂದ ಕೂಡಿರುವ ಬಂಧೀಖಾನೆ ಇದಾಗಿದೆ. ನಡೆದಾಡಲು ಕೂಡ ಜಾಗ ಇಲ್ಲದಿರುವುದರಿಂದ ಕೈದಿಗಳು ನಿತ್ಯವೂ ಆ ಕಾರಣಕ್ಕೆ ಹೊಡೆದಾಡಿಕೊಂಡು ಸಾಯುತ್ತಾರೆ; ಸತ್ತ ಕೈದಿಗಳ ಮಾಂಸವನ್ನು ಇತರ ಕೈದಿಗಳು ತಾವು ಜೀವಂತ ಇರುವುದಕ್ಕಾಗಿ ತಿನ್ನುವ ಪರಿಸ್ಥಿತಿ ಇದೆಯಂತೆ.
ಇನ್ನೂ ಆಘಾತಕಾರಿ ಅಂಶವೆಂದರೆ ಗಿಟಾರೆಮಾ ಜೈಲಿನಲ್ಲಿ ದಿನನಿತ್ಯವೂ 7 – 8 ಕೈದಿಗಳು ಹೊಡೆದಾಟ ಬಡಿದಾಟದಲ್ಲೇ ಸಾಯುತ್ತಿದ್ದು ಕಾಲಿಗೆ ಚಪ್ಪಲಿ ಇಲ್ಲದೆ ಬರಿ ಕಾಲಲ್ಲೇ ಇರುವ ಕೈದಿಗಳಿಗೆ ಇಲ್ಲಿ ಕಾಲಿನ ಹುಣ್ಣು ಸಾಮಾನ್ಯವಾಗಿಬಿಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿರುವ ಕೈದಿಗಳ ನರಕ ಯಾತನೆ, ಹೊಡೆದಾಟ, ನಿತ್ಯ ಸಾವು, ಮಾಂಸ ಭಕ್ಷಣೆ ಎಲ್ಲವೂ ಸಾಮಾನ್ಯವೆಂಬಂತೆ ನಡೆಯುತ್ತಿದ್ದು ಈವರೆಗೆ ಜೈಲಿನ ಮೂಲ ಸೌಕರ್ಯ ಸುಧಾರಣೆಗಾಗಿ ನಡೆದಿರುವ ಯಾವ ಹೋರಾಟವೂ ಪ್ರಯೋಜನವಾಗಿಲ್ಲವಂತೆ.