*ಪೊಲೀಸರಿಗೆ ಹೈಕೋರ್ಟ್ ನಿಂದ ಖಡಕ್ ಎಚ್ಚರಿಕೆ*
ಬೆಂಗಳೂರು: ಸುಮ್ಮನೆ ಸುಮ್ಮನೆ ಕೇಸ್ ಹಾಕಿ ಅರೆಸ್ಟ್ ಮಾಡಿ ಜೈಲ್ ಪಾಲು ಮಾಡಿ ಕೋರ್ಟ್ ಕಚೇರಿ ಅಲೆಯುವಂತೆ ಮಾಡೋ ಪೊಲೀಸರಿಗೆ ಹೈಕೋರ್ಟ್ ಖಡಕ್ ಎಚ್ಚರಿಕೆಯನ್ನು ನೀಡಿದೆ.
ಹೌದು, ಯಾವುದೋ ಕೇಸಿಗೆ ಇನ್ಯಾರನ್ನೋ ಅರೆಸ್ಟ್ ಮಾಡಿ ಜನಸಾಮಾನ್ಯರಿಗೆ ಪೊಲೀಸರು ಕಿರುಕುಳು ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಅಷ್ಟೇ ಅಲ್ಲದೇ ಸಾಕ್ಷಿ ಏನು ಇಲ್ಲ ಅಂತ ಬಿಟ್ಟು ಕಳುಹಿಸಿದ ಉದಾಹರಣೆಗಳಿವೆ. ಆದರೆ ಅರೆಸ್ಟ್ ಆದ ವ್ಯಕ್ತಿಯ ಗೌರವ ಸಮಾಜದಲ್ಲಿ ಏನಾಗಬಹುದು ಅನ್ನೋ ಕಿಂಚಿತ್ತು ಕಾಳಜಿ ಸಹ ಪೊಲೀಸರಿಗೆ ಇರೋದಿಲ್ಲ. ಹಾಗಾಗಿ ಹೈಕೋರ್ಟ್ ಸುಖಾ ಸುಮ್ಮನೆ ಅರೆಸ್ಟ್ ಮಾಡಿದರೆ ನಿಮ್ಮ ಮೇಲೆ ದಂಡ ಹಾಕಬೇಕಾಗುತ್ತದೆ ಅನ್ನೋ ಎಚ್ಚರಿಕೆ ನೀಡಿದೆ.ಮಂಗಳೂರಿನ ಕೇಸ್ ಒಂದರ ವಿಚಾರಣೆ ಸಂದರ್ಭದಲ್ಲಿ ಈ ವಿಚಾರದ ಬಗ್ಗೆ ನ್ಯಾಯಾಧೀಶರು ಹೇಳಿದ್ದಾರೆ. ಎಫ್ಐಆರ್ ಹಾಕುವಾಗ ಇರೋ ವ್ಯಕ್ತಿಯ ಹೆಸರು ಚಾರ್ಜ್ ಶೀಟ್ ಹಾಕುವಾಗ ಇರೋದಿಲ್ಲ ಇದರಿಂದ ಆತನ ವಿರುದ್ಧ ಯಾವುದೇ ಸಾಕ್ಷಾಧಾರ ಇಲ್ಲವೆಂದು ಗೊತ್ತಾಗುತ್ತದೆ. ಇದರಿಂದ ಆ ವ್ಯಕ್ತಿಯ ಘನತೆ ಸಮಾಜದಲ್ಲಿ ಆತನ ಗೌರವಕ್ಕೆ ಧಕ್ಕೆಯಾಗುತ್ತದೆ. ಹಾಗಾಗಿ ಸುಖಾ ಸುಮ್ಮನೆ ಅರೆಸ್ಟ್ ಆಗಿ ಜೈಲು ಶಿಕ್ಷೆ ಅನುಭವಿಸಿದ್ದಕ್ಕಾಗಿ ಆ ವ್ಯಕ್ತಿಯು ಪರಿಹಾರ ಕೇಳಬಹುದು ಪೊಲೀಸರ ಮೇಲೆ ಕೇಸ್ ಸಹ ದಾಖಲಿಸಬಹುದು ಅನ್ನೋ ಅಭಿಪ್ರಾಯವನ್ನು ಹಿರಿಯ ವಕೀಲರು ಶ್ಯಾಮ್ ಸುಂದರ್ ವ್ಯಕ್ತಪಡಿಸಿದರು.