ಕಾರವಾರ: ಭಾನುವಾರ ಸುರಿದ ಭಾರಿ ಮಳೆಯಿಂದ ಹಾನಿಗೊಳ
ಗಾದ ಅಂಕೋಲಾದ ವಿವಿಧ
ಪ್ರದೇಶಗಳಿಗೆ ಕುಮಟಾ ಸಹಾಯಕ ಆಯುಕ್ತರಾದ ಲಕ್ಷ್ಮೀಪ್ರಿಯಾ ಅವರು ಮಂಗಳವಾರ ಬೆಳಿಗ್ಗೆ ಭೇಟಿ ನೀಡಿ ಪರೀಶೀಲಿಸಿದರು.

ಮನೆಗಳಿಗೆ ನೀರು ನುಗ್ಗಿ ತೊಂದರೆಯಾಯಿತು ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಹೀಗಾಗಿ ಪರಿಶೀಲನೆ ನಡೆಸಿದ ಅವರು, ಪಟ್ಟಣದ ಕೋಟೆವಾಡ, ಲಿಂಬುಚಾಳ, ಶಿವಾಜಿ ವಾಸ್ಟರ್‌ವಾಡಾಗಳಿಗೆ ಭೇಟಿ ನೀಡಿದರು. ಪುರಸಭೆ ಮುಖ್ಯಾಧಿಕಾರಿ, ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ರಸ್ತೆ ಕಾಮಗಾರಿ ನಡೆಸುತ್ತಿರುವ ಐಆರ್‌ಬಿ ಸಂಸ್ಥೆಯ ಅಧಿಕಾರಿಗಳೂ ಜತೆಗಿದ್ದರು.

ಮನೆಗಳಿಗೆ ನೀರು ನುಗ್ಗಿದ ಪ್ರದೇಶಗಳ ಒಳಚರಂಡಿಯಲ್ಲಿ ಕಸಕಡ್ಡಿ ಕಟ್ಟಿಕೊಂಡಿದೆ. ಹೀಗಾಗಿ ನೀರು ಸರಾಗವಾಗಿ ಹರಿದು ಹೋಗದಿರುವುದು ಗಮನಕ್ಕೆ ಬಂದಿದೆ ಎಂದು ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ಒಳಚರಂಡಿಯನ್ನು ಸ್ವಚ್ಛಗೊಳಿ
ಸಿದ್ದು, ನೀರು ಸರಾಗವಾಗಿ ಹರಿಯು
ತ್ತಿದೆ. ಅಲ್ಲದೇ ಮಾಧ್ಯಮಗಳಲ್ಲಿ ಉಲ್ಲೇಖಿಸಿದಷ್ಟು ಮನೆಗಳು ಈ ಪ್ರದೇಶ
ದಲ್ಲಿಲ್ಲ. ಮಳೆಯಿಂದ ಹಾನಿಯಾಗು
ವಂತಹ ಯಾವುದೇ ಸಂದರ್ಭ ನಿರ್ಮಾಣವಾಗಿಲ್ಲ ಎಂದು ಅವರು ಹೇಳಿದ್ದಾರೆ. ನಾಗರಿಕರು ತಮ್ಮ ಮನೆಯ ಕಸವನ್ನು ಪುರಸಭೆಯ ವಾಹನಕ್ಕೇ ನೀಡಬೇಕು. ಯಾವುದೇ ಕಾರಣಕ್ಕೂ ಚರಂಡಿಯಲ್ಲಿ ಹಾಕಬಾರದು ಎಂದು ಸ್ಥಳೀಯರಿಗೆ ಮನವರಿಕೆ ಮಾಡಿ
ಕೊಟ್ಟಿರುವುದಾಗಿ ಅವರು ತಿಳಿಸಿದರು.