ಅಂಕೋಲಾ‌: ತಾಲ್ಲೂಕಿನ ಸುಂಕಸಾಳದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮಂಗಳವಾರ ಲಾರಿ ಮತ್ತು ಟೆಂಪೊ ಟ್ರಾವೆಲರ್ ಮುಖಾಮುಖಿ ಡಿಕ್ಕಿಯಾಗಿ ಟೆಂಪೊದ ಚಾಲಕ ಸೇರಿ 17 ಜನರು ಗಾಯಗೊಂಡಿದ್ದಾರೆ.

ಟೆಂಪೊ ಟ್ರಾವೆಲರ್‌ ಗದಗದಿಂದ ಗೋಕರ್ಣಕ್ಕೆ ಬರುತ್ತಿತ್ತು. ಬಸವರಾಜ್ ಅಣ್ಣಿಗೇರಿ, ಕೃಷ್ಣ ಅಣ್ಣಿಗೇರಿ ಮತ್ತು ಶಕುಂತಲಾ ಗಂಭೀರ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.

ಟೆಂಪೊ ಚಾಲಕ ಅಭಿಷೇಕ ಕಂಬಳಿ, ವಿಷ್ಣು ಜಕನೂರ, ಶಕುಂತಲಾ, ಚಂದ್ರಶೇಖರ, ತನಿಷ್ಕಾ, ರಾಘವೇಂದ್ರ, ತ್ರಿಶಾ, ಪದ್ಮಾ, ವಿದ್ಯಾ, ರಾಜೇಶ್ವರಿ, ಲಕ್ಷ್ಮಿ, ರಂಗನಾಥ ಜಕನೂರ, ಅಲ್ಲಾಭಕ್ಷ ಕಾತರಕಿ, ಚೇತನ ಹಿರೇಮಠ ಅವರಿಗೂ ಗಾಯಗಳಾಗಿವೆ. ಇವರೆಲ್ಲರೂ ಗದಗ ತಾಲ್ಲೂಕಿನವರಾಗಿದ್ದಾರೆ.

ಲಾರಿ ಚಾಲಕ ತಲೆಮರೆಸಿಕೊಂಡಿ
ದ್ದಾನೆ. ಈ ಕುರಿತು ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.