ಹೊನ್ನಾವರ ಕಡ್ಲೆ ಗ್ರಾಮದ ಹವ್ಯಕ ಅಭಿವೃದ್ದಿ ಸಂಘದ ವತಿಯಿಂದ 11ನೇ ವರ್ಷದ ವಾರ್ಷಿಕೋತ್ಸವನ್ನ ಶ್ರೀ ಉಪ್ಪಲೇ ಮಹಾಲಿಂಗೇಶ್ವರ ದೇವಾಲಯದಲ್ಲಿ ಆಚರಿಸಲಾಯಿತು ಬೆಳಗಿನ ಸಂದರ್ಭದಲ್ಲಿ ಗಣಹವನ.ಏಕಾದಶ ರುದ್ರಹವನ. ಮಹಾ ನಂದಿಗೆ ಬೆಣ್ಣೆ ಸೇವೆ ಪರಿವಾರದೇವರುಗಳ ಸೇವೆ ಮಹಾಲಿಂಗೇಶ್ವರನಿಗೆ ಮಹಾ ಪೂಜೆ ಪ್ರಸಾದ ವಿತರಣಾ ಕಾರ್ಯಕ್ರಮ ನೆರವೇರಿತು
ಸಂಜೆ ಹವ್ಯಕ ಅಭಿವೃದ್ದಿ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ವಾಣಿಜ್ಯ ರತ್ನ ಮತ್ತು ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಹೆಗ್ಡೆ ಎಗ್ರೋ ಟ್ಟೆಡರ್ಸ ಮಾಲಿಕರಾದ ಶ್ರೀಯುತ ಎಂ ಜಿ ಹೆಗಡೆ ಕಡ್ಲೆ ಇವರನ್ನ ಸನ್ಮಾನಿಸಲಾಯಿತು.
ಕುಮಾರ ರವಿ ಪ್ರಕಾಶ ಹೆಗಡೆ ಅಪ್ಪಕೆರೆ ಹರ್ಷಾ ದತ್ತಾತ್ರೇಯ ಹೆಗಡೆ ಗಂಗೊಳ್ಳಿ ಇವರ ಪ್ರತಿಭೆಯನ್ನ ಗುರುತಿಸಿ ಗೌರವಿಸಲಾಯಿತು.
ಪ್ರಮುಖ ಉಪನ್ಯಾಸಕರಾಗಿ ಆಗಮಿಸಿದ ಪ್ರೊ ವಿಷ್ಣು ಜೋಷಿಯವರು ಬ್ರಾಹ್ಮಣರ ಆಚಾರ ವಿಚಾರ ಹೇಗಿರಬೇಕು ಎನ್ನುವ ಕುರಿತು ಉಪನ್ಯಾಸ ನೀಡಿದರು ಇನ್ನೋರ್ವ ಉಪನ್ಯಾಸಕರಾಗಿ ಆಗಮಿಸಿದ ಪ್ರೊ ಐ ವಿ ಜೋಷಿಯವರು ಹವ್ಯಕರಲ್ಲಿ ಸಂಘಟನೆಯ ಅವಷ್ಯಕತೆಯ ಅನಿವರ್ಯತೆಯ ಕುರಿತು ವಿವರಿಸಿದರು. ಈ ಸಂದರ್ಭದಲ್ಲಿ ಸಂಘದ ಹಾಲಿ ಅಧ್ಯಕ್ಷ ಎಂ ಸಿ ಹೆಗಡೆ ಹಾಗೂ ಕಾರ್ಯದರ್ಶಿ ಭಾಲಚಂದ್ರ ಹೆಗಡೆಯವರು ನೂತನ ಅಧ್ಯಕ್ಷ ವಿ ಡಿ ಹೆಗಡೆ ಕಡ್ಲೆ ಹಾಗೂ ಕಾರ್ಯದರ್ಶಿ ಸದಾನಂದ ಭಟ್ಟ ಅವರಿಗೆ ಅಧಿಕಾರ ಹಸ್ತಾಂತರಿಸಿದರು.ಎನ್ ವಿ ಹೆಗಡೆಯವರು ಸನ್ಮಾನ ಪತ್ರ ವಾಚಿಸಿದರು ಸುಬ್ರಮಣ್ಯ ಭಟ್ಟ ಅವರು ಸಂಘದ ದ್ಯೆಯೋದ್ದೆಶವನ್ನ ವಿವರಿಸಿದರು
ದೇವಾಲಯದ ಅರ್ಚಕರಾದ ಪರಮೇಶ್ವರ ಭಟ್ಟ ಹಾಗು ಯುವ ವೈಧೀಕ ಶಿವರಾಮ ಭಟ್ಟ ವೇದಘೋಷ ಮಾಡಿದರು ಹೇರಂಭ ಹೆಗಡೆಯವರು ಗಣಪತಿ ಸ್ತುಥಿಯನ್ನ ಮಾಡಿದರು ಕೃಷ್ಣಾನಂದ ಭಟ್ಟ ಅವರು ಸರ್ವರನ್ನೂ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.
ಕಡ್ಲೆ ಗ್ರಾಮದ ಹವ್ಯಕರು ಉಪಸ್ಥಿತರಿದ್ದರು.