ಉಪ್ಪಳ ಹನುಮಾನ್ ನಗರ ಕಡಲು ಕೊರೆತ ಸ್ಥಳಗಳಿಗೆ ಬಿಜೆಪಿ ನಿಯೋಗ ಭೇಟಿ, ಪರಿಶೀಲನೆ
ಮಂಜೇಶ್ವರ ಶಾಸಕರ, ಹಾಗೂ ಸಂಸದರ ಬೇಜವಾಬ್ದಾರಿತನ -ನ್ಯಾ/ ಶ್ರೀಕಾಂತ್ .
ಮಂಗಲ್ಪಾಡಿ ಉಪ್ಪಳ ಹನುಮಾನ್ ನಗರ, ಶಾರದಾ ನಗರ ಕಡಪರ ಪ್ರದೇಶ ಗಳಲ್ಲಿ ಕಡಲು ಕೊರೆತ ಅವ್ಯವಹಕ ವಾಗಿದ್ದು ಪ್ರದೇಶದ ಜನತೆ ಮೀನುಗಾರ ಕುಟುಂಬ ಭಯ ಭೀತಿಯಿಂದ ದಿನ ಕಲಿಯಬೇಕಾದ ಪರಿಸ್ಥಿತಿ. ಬೀಚ್ ಸಂಪರ್ಕ ರಸ್ತೆಗಳೆಲ್ಲ ಸಮುದ್ರ ಪಾಲಾಗಿದ್ದು ನಿತ್ಯ ಸಂಚಾರಕ್ಕೆ ಅಡಚನೆ ಯಾಗಿದೆ. ವರ್ಷಗಳಿಂದ ಇದೆ ಪರಿಸ್ಥಿತಿ ಮುಂದುವರಿದಿದೆ ಆದರೂ ಮಂಜೇಶ್ವರ ಶಾಸಕರಗಲಿ ಕಾಸರಗೋಡು ಸಂಸದರು ,ಸ್ಥಳೀಯ ಅಡಲಿತದ ನಿರ್ಲಕ್ಷ್ಯ ದಿಂದ ಜನತೆ ಸಂಕಷ್ಟ ಅನುಭವಿ ಸುವಂತಾಗಿದೆ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಅಧಿಕಾರಿಗಳ ಹಾಗೂ ರಾಜ್ಯ ಸರಕಾರದ ನಡೆಯನ್ನು ಖಂಡಿಸಿದರು. ಕೂಡಲೇ ಸ್ಥಳೀಯ ಮೀನುಗಾರರಿಗೆ ಉಚಿತ ರೇಷನ್, ಹಾಗೂ ಉಚಿತ ವೈದ್ಯಕೀಯ ವ್ಯವಸ್ಥೆ ಕೂಡಲೇ ಮಾಡಬೇಕು ಹಾಗೂ ಸಂಪರ್ಕ ರಸ್ತೆಯ ದುರಸ್ತಿ , ಕೊರೆತ ತಡೆಗೆ ಬೃಹತ್ ಕಲ್ಲುಗಳನ್ನು ಸಮುದ್ರ ತಡೆಗೆ ಹಾಕಬೇಕೆಂದು ಬಿಜೆಪಿ ಆಗ್ರಹಿಸಿದೆ. ಹಾನಿಗಿಡದ ಪ್ರದೇಶ ಗಳಿಗೆ ಬಿಜೆಪಿ ನಿಯೋಗ ಭೇಟಿ ನೀಡಿತು ಜಿಲ್ಲಾಧ್ಯಕ್ಷ ಶ್ರೀಕಾಂತ್, ಮಂಡಲಾಧ್ಯಕ್ಷ ಸತಿಸ್ಚಂದ್ರ ಭಂಡಾರಿ, ಪ್ರ.ಕಾರ್ಯದರ್ಶಿ ಆದರ್ಶ್ ಬಿಎಂ, ಮಂಗಲ್ಪಾಡಿ ಪಂಚಾಯತ್ ಸಮಿತಿ ಅಧ್ಯಕ್ಷ ಸುರೇಶ್ ಶೆಟ್ಟಿ ,ಮುಖಂಡರುಗಳಾದ ಬಾಲಕೃಷ್ಣ ಅಂಬರ್, ಮಹೇಶ್ ಕೆವಿ, ರಂಜಿತ್ ಶಾರದಾ ನಗರ, ಹರಿಶ್ಚಂದ್ರ ಎಂ, ರಾಜೇಶ್, ತರನಾಥ್ ಹಾಗೂ ಸ್ಥಳೀಯ ಕಾರ್ಯಕರ್ತರು ಉಪಸ್ಥಿತರಿದ್ದರು.