ವಿನಯ ಕಬ್ಬಿನಗದ್ದೆ , ಹೆಸರಿಗೆ ತಕ್ಕುದಾಗಿ ವಿನಯವಂತನೇ … ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು ಕಲ್ಲಬ್ಬೆ ಗ್ರಾಮದಲ್ಲಿ 6-4-1987 ಶ್ರೀ ರಾಮನವಮಿಯಂದು ಜನನವಾಯಿತು . ಶ್ರೀ
ಎಸ್. ಜಿ ಭಟ್ ಮತ್ತು ಶ್ರೀಮತಿ ವಿಜಯಲಕ್ಷ್ಮಿ ದಂಪತಿಗಳ ಸುಪುತ್ರನಾದ ವಿನಯನ
ಬಾಲ್ಯಶಿಕ್ಷಣ- ಹೊನ್ನಾವರ ತಾಲ್ಲೂಕಿನ ಹಡಿನಬಾಳದ ಶ್ರೀವಿಷ್ಣುಮೂರ್ತಿ ದೇವಾಲಯದ ಬಳಿಯ ಅಂಗನವಾಡಿಯಲ್ಲಿ ಪ್ರಾರಂಭವಾಯಿತು . ಮುಂದೆ
ಪ್ರಾಥಮಿಕ ಶಿಕ್ಷಣ- ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಡಿನಬಾಳ, ಹೊನ್ನಾವರ ಇಲ್ಲಿ 1ನೇ ತರಗತಿಯಿಂದ 4ನೇ ತರಗತಿವರೆಗೆ ,
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಿರ್ವತ್ತಿಕೊಡ್ಲು, ಕವಲಕ್ಕಿ ಹೊನ್ನಾವರ ಇಲ್ಲಿ 5 ರಿಂದ 7 ನೇ ತರಗತಿಯವರೆಗೆ ,
ಪ್ರೌಢ ಶಿಕ್ಷಣ- ಶ್ರೀಸುಬ್ರಹ್ಮಣ್ಯ ವಿದ್ಯಾಸಂಸ್ಥೆ ಕವಲಕ್ಕಿ ಹೊನ್ನಾವರ ಇಲ್ಲಿ 8 ರಿಂದ 10 ನೇ ತರಗತಿ ವರೆಗೆ ,
ಶ್ರೀಸುಬ್ರಹ್ಮಣ್ಯ ಪದವಿಪೂರ್ವ ಮಹಾವಿದ್ಯಾಲಯ ಕವಲಕ್ಕಿ, ಹೊನ್ನಾವರ ಇಲ್ಲಿ ಪಿಯುಸಿ ಶಿಕ್ಷಣ , ಕರ್ನಾಟಕ ಚಿತ್ರಕಲಾ ಪರಿಷತ್ತು ಬೆಂಗಳೂರು ಇಲ್ಲಿ ಬ್ಯಾಚುಲರ್ ಆಫ್ ವಿಜ್ಯುಯಲ್ ಆರ್ಟ(ಬಿವಿಎ)ನಲ್ಲಿ ಪದವಿ ಶಿಕ್ಷಣ , Art ಫೌಂಡಿಷನ್ ಶಿಕ್ಷಣ
ಡಿ .ಎಂ. ಎಸ್ .ಲಲಿತಕಲಾ ಮಹಾಸಂಸ್ಥಾನಂ ಮೈಸೂರು ಇಲ್ಲಿ ಬ್ಯಾಚುಲರ್ ಆಫ್ ಫೈನ್ ಆರ್ಟ (ಬಿಎಫ್ಎ) ಅನ್ವಯಿಕ ಕಲೆಯಲ್ಲಿ ಪದವಿ A Grade ನೊಂದಿಗೆ ಮುಕ್ತಾಯ ,
ನಂತರ ಡಿ .ಎಂ .ಎಸ್ .ಲಲಿತಕಲಾ ಮಹಾಸಂಸ್ಥಾನಂ ಮೈಸೂರು ಇಲ್ಲಿ ಮಾಸ್ಟರ್ ಆಫ್ ಫೈನ್ ಆರ್ಟ (ಎಂಎಫ್ಎ) ಜಾಹೀರಾತು ಮತ್ತು ಸಂವಹನದಲ್ಲಿ ಸ್ನಾತಕೋತ್ತರ ಪದವಿ A Grade ನೊಂದಿಗೆ ,ತದನಂತರ
ಮೈಸೂರು ವಿಶ್ವವಿದ್ಯಾಲಯದಲ್ಲಿ Art History ಯಲ್ಲಿ ಎಂಫಿಲ್ …..ಬೆಂಗಳೂರಿನ Eye density design & disply company ಯಲ್ಲಿ ಉದ್ಯೋಗ ವನ್ನು ಮಾಡುತ್ತಿದ್ದಾನೆ .
ಇದಲ್ಲದೇ ನೂರಾರು ಚಿತ್ರಕಲಾ ಕಲಾವಿದರಿಗೆ ಮಾರ್ಗದರ್ಶನ ಮತ್ತು ಸಹಾಯವನ್ನು ಮಾಡಿರುವ ವಿನಯ ಅನಾಥ ಮಕ್ಕಳ ಕೇಂದ್ರದ ವಿದ್ಯಾರ್ಥಿಗಳಿಗೆ ಉಚಿತ ಚಿತ್ರಕಲಾ ತರಬೇತಿಯನ್ನೂ ನೀಡುತ್ತಿದ್ದಾನೆ .
ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸುದ್ಧಿ ಚಿತ್ರಗಳ ಸಂಗ್ರಹದಲ್ಲಿ ದಾಖಲೆಯನ್ನು ನಿರ್ಮಿಸಿರುವ ವಿನಯನ ಸಾಧನೆ ಬಹು ದೊಡ್ಡದು . ಶ್ರೀರಾಮಚಂದ್ರಾಪುರಮಠದ ಸೇವಾಬಿಂದು ,ಧರ್ಮಭಾರತೀ ಮಾಸಪತ್ರಿಕೆ , ಉಲ್ಲೇಖ ವಿಭಾಗದ ಸೇವಾಬಿಂದುವೂ ಹೌದು .
1999 ನೇ ಇಸವಿಯಲ್ಲಿ “ಶ್ರೀಗುರು ಚಿತ್ರ ಭಾರತೀ”ಯ ಆರಂಭ (ಶ್ರೀಶ್ರೀಗಳ ಮತ್ತು ಶ್ರೀಮಠದ ಸಮಗ್ರ ಸುದ್ಧಿಚಿತ್ರಗಳ ಸಂಗ್ರಹ),
2000 ನೇ ಇಸವಿಯಲ್ಲಿ “ಚಿತ್ರಭಾರತೀ ಸಮೂಹ ಸಂಸ್ಥೆ” ಆರಂಭ( ಚಿತ್ರಕಲಾಶಿಕ್ಷಣ, ಸಾಂಸ್ಕೃತಿಕ),
2012 ನೇ ಇಸವಿಯಲ್ಲಿ “ಚಿತ್ರಭಾರತೀ ಪ್ರಕಾಶನ” ದ ಆರಂಭ (ಹತ್ತಾರು ಪುಸ್ತಕ, ಧ್ವನಿ ಮುದ್ರಿಕೆಗಳ ಅನಾವರಣ), 2015 ನೇ ಇಸವಿಯಲ್ಲಿ “ಚಿತ್ರಭಾರತೀ ಡಿಸೈನ್ ಸೊಲ್ಯೂಷನ್ಸ್ ಸಂಸ್ಥೆ ಆರಂಭ( ವಿನ್ಯಾಸ ಸಲಹೆ, ಜಾಹಿರಾತು ವಿನ್ಯಾಸ, ಗ್ರಾಫಿಕ್ ಡಿಸೈನಿಂಗ್ ) , ನೂರಾರು ವೇದಿಕೆಗಳ ಅಲಂಕಾರ, ಮಂಟಪಗಳ ನಿರ್ಮಾಣ ,
ಶ್ರೀರಾಮಚಂದ್ರಾಪುರಮಠದಲ್ಲಿ ನಡೆದ ಶ್ರೀರಾಮೋತ್ಸವದ ಕಲೋತ್ಸವದಲ್ಲಿ ” ಚಿತ್ರಭಾರತೀ ಸಂಗ್ರಹ ಪ್ರದರ್ಶನ ” . ಇದೆಲ್ಲದಕ್ಕೂ ಕಲಶಪ್ರಾಯವೆಂಬಂತೆ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಗಳವರಿಂದ ಸನ್ಮಾನವನ್ನೂ , ಅನುಗ್ರಹವನ್ನೂ ಪಡೆದ ಧನ್ಯ ವಿನಯನೆಂದರೆ ತಪ್ಪಲ್ಲ .ಗೋಕರ್ಣದಲ್ಲಿ ಸಂಪನ್ನವಾದ ಮಹಾಶಿವರಾತ್ರಿ ಉತ್ಸವದಲ್ಲಿ ಚಿತ್ರಭಾರತೀ ಪ್ರದರ್ಶನವೂ ನಡೆದು ಜನರಿಂದ ಪ್ರಶಂಸೆಯ ಮಹಾಪೂರದ ಸುರಿಮಳೆ !!
2018 ರಲ್ಲಿ ಡಾಕ್ಟರೇಟ್ ಪದವಿಯ ಅಧ್ಯಯನದ ಆರಂಭವನ್ನೂ ಮಾಡಿರುವ ವಿನಯನ ಸಾಧನೆ ಅಪಾರ .ಚಿತ್ರಕಲೆ, ಸಮಾಜಸೇವೆ, ಗುರುಸೇವೆ, ಸಾಂಸ್ಕೃತಿಕ ಕಾರ್ಯಗಳು ಎಂದರೆ ಅಚ್ಚುಮೆಚ್ಚು .
ಚಿತ್ರಕಲಾ ಪರಿಷತ್ ನಡೆಸುವ ಚಿತ್ರಸಂತೆಯಲ್ಲಿ ಚಿತ್ರಕಲಾ ಪ್ರದರ್ಶನವನ್ನೂ ನಡೆಸಿರುತ್ತಾನೆ .
ಚಿತ್ರಕಲಾ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುವ ವಿನಯನ ಬಹು ದೊಡ್ಡ ಕನಸು ನನಸಾಗಲೆಂದು ನಾವೆಲ್ಲರೂ ಹಾರೈಸೋಣವಲ್ಲವೇ