ಧರ್ಮಸ್ಥಳದಲ್ಲಿ ಊಟ ಮಾಡಿದ ಪ್ರತಿಯೊಬ್ಬರು ಈ ಸುದ್ದಿಯನ್ನು ಓದಿ… ಅನ್ನಪೂರ್ಣ ಬೋಜನಶಾಲೆಯ ಕೆಲವು ಸಂಗತಿಗಳು ನಿಮಗಾಗಿ*
ಸತ್ಯ, ನಿಷ್ಠೆ, ಧರ್ಮಕ್ಕೆ ಹೆಸರು ವಾಸಿ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮದ ನೆಲೆಯ ಧಾರ್ಮಿಕ ತಾಣವಾಗಿರುವ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿ ದಕ್ಷಿಣ ಭಾರತೀಯರ ಆರಾಧ್ಯ ಕ್ಷೇತ್ರವಾಗಿದೆ. ‘ಮಾತು ಬಿಡ ಮಂಜುನಾಥ’ ಎಂಬಂತೆ ಇಲ್ಲಿ ಮಾತಿಗೆ ಹೆಚ್ಚು ಮಹತ್ವ, ಮನ್ನಣೆ. ಶ್ರೀಕ್ಷೇತ್ರ ಧರ್ಮಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ತಾಣ.ಧರ್ಮಸ್ಥಳಕ್ಕೆ ಆಗಮಿಸಿದ ಯಾವುದೇ ಯಾತ್ರಿಕ ಅನ್ನಾಹಾರ ದೊರಕದೇ ಹಸಿದು ಮರಳಿ ಹೋಗಬಾರದು ಎಂಬುದು ಇಲ್ಲಿ ಅನೂಚಾನವಾಗಿ ನಡೆದು ಬಂದ ಸಂಪ್ರದಾಯ. “ಅನ್ನದಾನಕ್ಕಿಂತ ಇನ್ನು ದಾನವು ಇಲ್ಲ’ ಎಂಬಂತಿದೆ ಇಲ್ಲಿನ ಅಚ್ಚುಕಟ್ಟಾದ ವ್ಯವಸ್ಥೆ. ಧರ್ಮಸ್ಥಳದಲ್ಲಿ ಅನ್ನದಾಸೋಹಕ್ಕೆ ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ. ಸುಸೂತ್ರವಾಗಿ ಸಹಸ್ರಾರು ಮಂದಿಗೆ ಏಕಕಾಲದಲ್ಲಿ ದಾಸೋಹ ಕಲ್ಪಿಸಲಾಗುತ್ತದೆ.ಧರ್ಮಸ್ಥಳದ ಅಣ್ಣಪ್ಪನ ಸನ್ನಿಧಾನದಲ್ಲಿ ಸಿಗುವ ಅನ್ನದಾನದ ಬಗ್ಗೆ ಸ್ವಲ್ಪ ವರದಿ ನೀಡ್ತಿವಿ ಕೇಳಿ. ಅನ್ನಪೂರ್ಣ ಭೋಜನಶಾಲೆಯ ಬಗ್ಗೆ ಕೆಲ ಅಂಕಿ ಅಂಶಗಳನ್ನು ಹೇಳಿದ್ದೇವೆ ನೋಡಿ. 1955 ರಲ್ಲಿ ಹೆಗ್ಗಡೆಯವರ ತಂದೆಯವರು ಅನ್ನಪೂರ್ಣ ಭೋಜನ ಶಾಲೆ ಕಟ್ಟುವ ನಿರ್ಧಾರ ಮಾಡುತ್ತಾರೆ. ವಿಶಾಲವಾದ ಜಾಗ ಇರುವ ಈ ಭೋಜನಶಾಲೆಯಲ್ಲಿ ದಿನಕ್ಕೆ 25 ರಿಂದ 50 ಸಾವಿರ ಜನರು ಅನ್ನಪ್ರಸಾದ ಸ್ವೀಕರಿಸುತ್ತಾರೆ ದೀಪೋತ್ಸವದ ಸಂದರ್ಭದಲ್ಲಿ ಏನಿಲ್ಲವೆಂದರೂ ಒಂದು ಲಕ್ಷದ ವರೆಗೂ ಜನರು ಸೇರುತ್ತಾರೆ.ಇನ್ನು ಇಲ್ಲಿನ ಅಡುಗೆ ತಯಾರಿಯ ಬಗ್ಗೆ ನೀವು ಗಮನಿಸಬೇಕಾದ ಅಂಶ ಎಂದರೆ ಇಲ್ಲಿ ಮೊದಲು ಸ್ವಚ್ಛತೆಗೆ ಆದ್ಯತೆ ನಿಮಗೆ ಗೊತ್ತಿರಬಹುದು ಕೆಲ ದಿನಗಳ ಹಿಂದೆ ಸುಪ್ರೀಂ ಕೋರ್ಟ್ ಕೂಡ ಪೂರಿ ದೇವಾಲಯಕ್ಕೆ ಧರ್ಮಸ್ಥಳವನ್ನು ನೋಡಿ ಕಲಿಯಿರಿ ಎಂದು ಎಚ್ಚರಿಸಿತ್ತು ಅಷ್ಟೊಂದು ಸ್ವಚ್ಛತೆ ಇಲ್ಲಿ ಕಾಣಬಹುದು. ಊಟ ಬಳಸುವ ಸಾಮಗ್ರಿಯಿಂದ ಹಿಡಿದು ಅಡುಗೆ ಎಲ್ಲ ಕೆಲಸಗಳು ಆಧುನಿಕ ಯಂತ್ರದ ಬಳಕೆಯಿಂದಾನೆ.ನಿಮಗೆ ತಿಳಿದಿರಲಿ ದೀಪೋತ್ಸವದ ಸಂದರ್ಭದಲ್ಲಿ ಒಂದು ದಿನಕ್ಕೆ ಏನಿಲ್ಲ ಏನಾದ್ರು 8500 ಕೆಜಿ ಅಕ್ಕಿಯನ್ನು ಒಂದೇ ದಿನಕ್ಕೆ ಬಳಸುತ್ತಾರೆ. ಇನ್ನು ಉಳಿದ ದಿನಗಲ್ಲಿ 5000 ಕೆಜಿ ಯಷ್ಟು ಅಕ್ಕಿ ಬಳಸುವರು ದಿನಕ್ಕೆ ಏನಿಲ್ಲವೆಂದರೂ 3500 ಕೆಜಿ ತರಕಾರಿಯನ್ನು ಸಾಂಬಾರು ಮಾಡಲು ಬಳಸುತ್ತಾರೆ. ಭೋಜನ ಶಾಲೆಯಲ್ಲಿ 9 ಉದ್ದನೆಯ ಸಾಲುಗಳನ್ನು ನೀವು ಕಾಣಬಹುದು ಇದರಲ್ಲಿ ಒಂದೊಂದು ಸಾಲಿನಲ್ಲಿ 400 ಜನರು ಊಟಕ್ಕೆ ಕುಳಿತುಕೊಳ್ಳಬಹುದು.ದಿನಕ್ಕೆ 1000ದಿಂದ 1200 ತೆಂಗಿನಕಾಯಿಯನ್ನು ಅಡುಗೆಗೆ ಬಳಸಲಾಗುತ್ತದೆ. ಇನ್ನು ಊಟಕ್ಕೆ ಬೇಕಾದ ತರಕಾರಿಗಳನ್ನು ಕೆಲ ದಾನಿಗಳು ನೀಡಿ ಹೋಗುತ್ತಾರೆ ಮತ್ತು ದೇವಾಲಯದ ಆಡಳಿತದಲ್ಲಿರುವ ತೋಟಗಳಲ್ಲಿ ಬೆಳೆದ ತರಕಾರಿ, ತೆಂಗಿನಕಾಯಿಗಳನ್ನು ಬಳಸುತ್ತಾರೆ. ಇನ್ನು ಮತ್ತೊಂದು ಮಹತ್ವದ ವಿಚಾರ ಏನೆಂದರೆ ಧರ್ಮಸ್ಥಳದಲ್ಲಿ ಸಿಗುವಂತಹ ಅನ್ನಪ್ರಸದ ದೇಶದ ಯಾವುದೇ ಮೂಲೆಯಲ್ಲಿರುವ ದೇವಾಲಯದಲ್ಲಿ ಸಿಗಲ್ಲ ಎಂದು ಹೇಳಬಹುದು ಅಷ್ಟೊಂದು ಪ್ರಸಿದ್ದಿ ಪಡೆದಿದೆ ಈ ಅನ್ನಛತ್ರ.