*ಕನಸಿನಲ್ಲಿ ಶಿವಲಿಂಗ ಬಂದರೆ ಅದರ ಅರ್ಥ ನಿಮಗೆ ಗೊತ್ತೇ..!! ತಿಳಿದರೆ ಶಾಕ್ ಆಗ್ತೀರ!! ಇಲ್ಲಿದೆ ಮಾಹಿತಿ ತಪ್ಪದೇ ತಿಳಿದುಕೊಳ್ಳಿ ಹಾಗೂ ಶೇರ್ ಮಾಡಿ,*
ಎಲ್ಲರೂ ಕನಸುಗಳನ್ನು ಕಾಣುತ್ತಾರೆ.ಅದರ ಹಗಲು ಕನಸು ಇಲ್ಲಿ ಬರುವುದಿಲ್ಲ, ಕೇವಲ ನಿದ್ರೆ ಮಾಡುವಾಗ ಬರುವ ಕನಸು ಒಂದು ಅರ್ಥವನ್ನು ಹೇಳುತ್ತದೆ. ಕೆಲವರಿಗೆ ರಾತ್ರಿ ಕಂಡಿರುವ ಕನಸು ಬೆಳಿಗ್ಗೆ ಎದ್ದ ಕೂಡಲೇ ಮರೆತು ಹೋಗಿರುತ್ತಾರೆ.ಇನ್ನು ಕೆಲವರಿಗೆ ಹಾಗೆಯೇ ಕನಸು ನೆನಪಿನಲ್ಲಿ ಉಳಿದುಕೊಳ್ಳುತ್ತವೆ. ಹಾಗಾಗಿ ರಾತ್ರಿ ಮಲಗುವ ಕನಸಿನಲ್ಲಿ ಶಿವನು ಬಂದರೆ ಏನಾಗುತ್ತದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ..
ಧಾರ್ಮಿಕತೆ ಕನಸಿನಲ್ಲಿ ಬಂದರೆ:- ನೀವು ನಂಬುವ ಧರ್ಮದ ಬಗ್ಗೆ ಕನಸಿನಲ್ಲಿ ಬಂದರೆ ಸುತ್ತಮುತ್ತಲಿನ ಜನರೊಂದಿಗೆ ಉತ್ತಮ ಬಾಂಧವ್ಯ ಮತ್ತು ಸ್ನೇಹಪೂರ್ವಕವಾಗಿ ಇರುವುದನ್ನು ಸೂಚಿಸುತ್ತದೆ.
ಶಿವಲಿಂಗ ಕನಸಿನಲ್ಲಿ ಬಂದರೆ:- ಶಿವಲಿಂಗವು ಕನಸಿನಲ್ಲಿ ಬಂದರೆ ನಿಮಗೆ ತಪಸ್ಸು ಅಥವಾ ಧ್ಯಾನದ ಅವಶ್ಯಕತೆ ಪ್ರತಿದಿನವೂ ಇದೆ ಎನ್ನುವುದನ್ನು ಸೂಚಿಸುತ್ತದೆ.ಶಿವನನ್ನು ಧ್ಯಾನ ಮಾಡಿದರೆ ನಿಮ್ಮ ಮನದಲ್ಲಿ ನೆಲೆಸುತ್ತಾನೆ.ನಿಮ್ಮ ಸಮಸ್ಯೆಗಳು ಕೊನೆಯಾಗಿ ವಿಜಯವನ್ನು ಸಾಧಿಸುತ್ತೀರಿ ಎನ್ನುವುದನ್ನು ಹೇಳುತ್ತದೆ.
ಶಿವ ಪಾರ್ವತಿ ಕನಸಿನಲ್ಲಿ ಬಂದರೆ:- ನಿಮ್ಮ ಕನಸಿನಲ್ಲಿ ಶಿವ ಪಾರ್ವತಿ ಬಂದರೆ ನಿಮ್ಮ ಮನೆ ಬಾಗಿಲಿಗೆ ಅವಕಾಶಗಳು ಬರುತ್ತವೆ ಎಂದು ಸೂಚಿಸುತ್ತದೆ. ಹಾಗೆಯೇ ಅಧಿಕ ಲಾಭ, ಪ್ರಯಾಣ,ಸಂತಾನ,ಆರ
ೋಗ್ಯ, ಉದ್ಯೋಗ,ಧಾನ್ಯ ಮೊದಲಾದವುಗಳು ನಿಮಗೆ ತಕ್ಷಣದಲ್ಲಿ ಶುಭ ತರುತ್ತದೆ ಎಂದು ಅರ್ಥ.
ಶಿವನ ತಾಂಡವ ನೃತ್ಯ ಕನಸಿನಲ್ಲಿ ಬಂದರೆ:- ಈ ರೀತಿ ಕನಸು ಬಂದರೆ ಶೀಘ್ರದಲ್ಲಿ ನಿಮ್ಮ ತೊಂದರೆಗಳು ನಿವಾರಣೆಯಾಗುತ್ತದೆ ಎಂದು ಸೂಚಿಸುತ್ತದೆ.ಏಕೆಂದರೆ ಶಿವನ ನೃತ್ಯ ಭಾವೋದ್ವೇಗದ ಪ್ರತೀಕವಾಗಿರುತ್ತ
ವೆ.ನಿಮ್ಮ ಕೆಲಸಗಳಿಗೆ ಒಳ್ಳೆಯ ಫಲಿತಾಂಶ ಸಿಗಲಿದೆ ಹಾಗೂ ಇನ್ನೂ ಹೆಚ್ಚು ಶ್ರಮ ಬೇಕೆಂದು ಶಿವನು ತನ ನೃತ್ಯದ ಮೂಲಕ ತಿಳಿಸುತ್ತಾನೆ.
ಶಿವನ ಮಂದಿರ ಕನಸಿನಲ್ಲಿ ಬಂದರೆ:- ಈ ರೀತಿ ಕನಸು ಬಂದರೆ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರು ಬಹುಬೇಗನೆ ಅವರ ಸಮಸ್ಯೆಗಳು ನಿವಾರಣೆಯಾಗುತ್ತದೆ ಹಾಗೂ ದ್ವಿಪುತ್ರರನ್ನು ಹೊಂದುವ ಸಂಭವವನ್ನು ಸೂಚಿಸುತ್ತದೆ.
ತ್ರಿಶೂಲ ಕನಸಿನಲ್ಲಿ ಬಂದರೆ:- ಈ ರೀತಿ ತ್ರಿಶೂಲವು ಕನಸಿನಲ್ಲಿ ಬಂದರೆ ಇಂದಿನ ಅಥವಾ ಮುಂದಿನ ಭವಿಷ್ಯದಲ್ಲಿ ಎದುರಾಗುವ ಯಾವುದೇ ಪ್ರಕರಣ ಸಂಬಂಧಿಸಿದ್ದು,ಇದರ ಬಗ್ಗೆ ಎಚ್ಚರಿಸಲು ಸೂಚಿಸುತ್ತದೆ. ಏಕೆಂದರೆ ಶಿವನ ದೃಶ್ಯದ ಮೂರು ಮನೆಗಳು ಮನುಷ್ಯನ ಮೂರು ಸ್ಥಿತಿಗಳಾಗಿರುತ್ತದೆ. ಅವುಗಳು ಎಚ್ಚರ,ನಿದ್ದೆ ಮತ್ತು ಕನಸಿನ ಸ್ಥಿತಿಗಳನ್ನು ಬಿಂಬಿಸುತ್ತದೆ.
ಕನಸಿನಲ್ಲಿ ಡಮರುಗ ಬಂದರೆ:- ನಿಮ್ಮ ಜೀವನದಲ್ಲಿ ವೈಯಕ್ತಿಕ ಮತ್ತು ವೃತ್ತಿ ಪರವಾಗಿ ಧನಾತ್ಮಕ ಶಕ್ತಿಯೂ ಬರುತ್ತದೆ ಎಂದು ಅರ್ಥ.ಡಮರುಗ ವಿಶ್ವದ ಪ್ರತೀಕವಾಗಿದೆ ಹಾಗೂ ಶ್ರವಣ ಶಕ್ತಿಯ ಸಂಖ್ಯೆಯು ಕೂಡ ಆಗಿದೆ.