*ಕುಮಾರ ಸ್ವಾಮಿ ಬಜೆಟ್ ಮುಖ್ಯಾಂಶ*
*ಬೆಂಗಳೂರು:* ಮುಖ್ಯಮಂತ್ರಿ,ಹಣಕಾಸು ಖಾತೆ ಹೊಂದಿರುವ ಎಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ಮಂಡಿಸುತ್ತಿದ್ದು, ಅದರ ಮುಖ್ಯಾಂಶಗಳು ಈ ಕೆಳಗಿನಂತಿವೆ
2 ಲಕ್ಷದ 18 ಸಾವಿರದ 448 ಕೋಟಿ ರೂಪಾಯಿ ಬಜೆಟ್ ಗಾತ್ರ
• ಹಿಂದಿನ ಸರ್ಕಾರದ ಸಾಲಮನ್ನಾ ಬಾಕಿ ಪೂರ್ಣ ಪಾವತಿ
• 31.12.2017 ರ ವರೆಗಿನ ಎಲ್ಲಾ ಸುಸ್ತಿ ಸಾಲ ಮನ್ನಾ
• ಕಳೆದ 3 ವರ್ಷಗಳಲ್ಲಿ ಆದಾಯ ತೆರಿಗೆ ಕಟ್ಟಿರುವ ರೈತರಿಗೆ ಸಾಲ ಮನ್ನಾ ಅನ್ವಯವಾಗುವುದಿಲ್ಲ.
• ಸಾಲ ಮರು ಪಾವತಿಸಿದ ರೈತರಿಗೂ ಪ್ರಯೋಜನ. ಅವರ ಖಾತೆಗೆ 25,000 ರೂಪಾಯಿ ಹಾಕಲಿರುವ ಸರ್ಕಾರ
• ರೈತರ ಪ್ರತೀ ಕುಟುಂಬಕ್ಕೆ 2 ಲಕ್ಷ ರೂಪಾಯಿ ಸಾಲ ಮನ್ನಾ
• ಒಟ್ಟು 34, 000 ಕೋಟಿ ರೂಪಾಯಿ ಸಾಲ ಮನ್ನಾ
• ಕೃಷಿ ವಲಯದಲ್ಲಿ 4.9 ರಷ್ಟು ಬೆಳವಣಿಗೆ ನಿರೀಕ್ಷೆ
• ಆಂಧ್ರದ ಮಾದರಿಯಲ್ಲಿ ಶೂನ್ಯ ಬಂಡವಾಳ ಕೃಷಿ ಪದ್ಧತಿ – ರೈತರು ಮಾರುಕಟ್ಟೆಯಿಂದ ಪರಿಕರ ಬಳಸುವುದಿಲ್ಲ. 50 ಕೋಟಿ ರೂ
• ಸಂಧ್ಯಾ ಸುರಕ್ಷಾ ಯೋಜನೆ ಮಾಸಿಕ ಮೊತ್ತ 600 ರಿಂದ 1000ಕ್ಕೆ ಏರಿಕೆ (65 ಮೀರಿದ ವೃದ್ಧರಿಗೆ ಅನ್ವಯ)
• ಕೃಷಿಕರಿಗಾಗಿ ಉನ್ನತ ಸಮಿತಿ
• ಇಸ್ರೆಲ್ ಮಾದರಿ ಕೃಷಿಗೆ 150 ಕೋಟಿ ರೂ ಮೀಸಲು .
• ಜನಪ್ರತಿನಿಧಿಗಳು ,ಅಧಿಕಾರಿಗಳು ಆರ್ಥಿಕ ಶಿಸ್ತು, ಅನಗತ್ಯ ದುಂದು ವೆಚ್ಚಗಳಿಗೆ ಕಡಿವಾಣ
ದುಬಾರಿ ;
• ಮದ್ಯದ ಮೇಲಿನ ತೆರಿಗೆ 4 % ಏರಿಕೆ
• ಡಿಸೇಲ್ ಮೇಲಿನ ಸೆಸ್ ಹೆಚ್ಚಳ -19 % ಸೆಸ್ 21 % ಗೆ ಏರಿಕೆ
• ಪೆಟ್ರೋಲ್ ದುಬಾರಿ -ಸೆಸ್ 30% ರಿಂದ 32 % ಹೆಚ್ಚಳ
• ವಿದ್ಯುತ್ ಯೂನಿಟ್ಗೆ 20 ಪೈಸೆ ಹೆಚ್ಚಳ
• ಹಿಂದಿನ ಸರ್ಕಾರದ ಅನ್ನಾಭಾಗ್ಯ ಸೇರಿದಂತೆ ಎಲ್ಲಾ ಯೋಜನೆಗಳು ಮುಂದುವರಿಕೆ
• ತೆಂಗು ಬೆಳೆಗಾರರ ಹಿತರಕ್ಷಣೆಗೆ 190 ಕೋಟಿ ರೂಪಾಯಿ
• ರಾಮನಗರದಲ್ಲಿ ಚಲನಚಿತ್ರ ವಿವಿ -30 ಕೋಟಿ
• ಹಾಸನ ಹಾಲು ಒಕ್ಕೂಟಕ್ಕೆ 50 ಕೋಟಿ ರೂ
• ಬೆಳ್ಳಂದೂರು ಕೆರೆ ಅಭಿವೃದ್ಧಿಗೆ 50 ಕೋಟಿ ರೂ
• ಕನಕಪುರದಲ್ಲಿ ಹೊಸ ವೈದ್ಯಕೀಯ ಕಾಲೇಜು
• 247 ಇಂದಿರಾ ಕ್ಯಾಂಟೀನ್ಗಳ ಸ್ಥಾಪನೆ
• ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ- ಪ್ರಾಥಮಿಕ ಹಂತದಲ್ಲಿ 1000 ಶಾಲೆಗಳಲ್ಲಿ ಯೋಜನೆ ಜಾರಿ. ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ ಮತ್ತು ಯುಕೆಜಿ
• ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಬಯೋ ಮೆಟ್ರಿಕ್ಸ್ 5 ಕೋಟಿ ರೂ.
• ಸರ್ಕಾರಿ ಶಾಲೆಗಳ ವಿಲೀನ
• ಬೆಂಗಳೂರಿನ 6 ಕಡೆ ಎಲಿವೇಟೆಡ್ ಕಾರಿಡಾರ್
*ಧಾರ್ಮಿಕ*
• ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ 25 ಕೋಟಿ ರೂಪಾಯಿ ಅನುದಾನ
• ಭಗೀರಥ, ಮಾದಾರ , ಭೋವಿ ಪೀಠ , ಕಾಗಿನೆಲೆ, ವಾಲ್ಮೀಕಿ , ದೇವಾಂಗ, ಕಂಬಾರ , ಹಡಪದ ಅಪ್ಪಣ್ಣ ಸೇರಿದಂತೆ ಹಲವು ಪೀಠಗಳಿಗೆ 25 ಕೋಟಿ ರೂ ಅನುದಾನ
*ಇಳಿಕೆ*
• ಅನ್ನಭಾಗ್ಯ ಅಕ್ಕಿ ಒಬ್ಬರಿಗೆ 7 ಕೆ.ಜಿ ಯಿಂದ 5 ಕೆ.ಜಿಗೆ ಇಳಿಕೆ
ರಿಯಾರಿತಿ ದರದಲ್ಲಿ ಅರ್ಧ ಕೆ.ಜಿ ತೊಗರಿಬೇಳೆ,1 ಕೆ.ಜಿ ಅಯೋಡಿನ್ ಉಪ್ಪು,1 ಕೆ.ಜಿ ತಾಳೆ ಎಣ್ಣೆ , 1 ಕೆ.ಜಿ ಸಕ್ಕರೆ.
• ಇಂಧನ ಇಲಾಖೆ -14, 123 ಕೋಟಿ ರೂ ಮೀಸಲು
• ಗ್ರಾಮೀಣಾಭಿವೃದ್ಧಿ -14,449 ಕೋಟಿ ರೂ ಮೀಸಲು
• ನಗರಾಭಿವೃದ್ಧಿ -17,727ಕೋಟಿ ರೂ ಮೀಸಲು
• ಆಹಾರ ಮತ್ತು ನಾಗರಿಕ ಸರಬರಾಜು -3,866 ಕೋಟಿ ರೂ ಮೀಸಲು
• ಶಿಕ್ಷಣ 26,581ಕೋಟಿ ರೂ ಮೀಸಲು
• ಜಲಸಂಪನ್ಮೂಲ -18,142 ಕೋಟಿ ರೂ ಮೀಸಲು
• ಸಮಾಜ ಕಲ್ಯಾಣ -11,788 ಕೋಟಿ ರೂ ಮೀಸಲು
• ಲೋಕೋಪಯೋಗಿ ಇಲಾಖೆ -10,200 ಕೋಟಿ ರೂ
• ಒಳನಾಡ ಸಾರಿಗೆ 7,993 ಕೋಟಿ ರೂ
• ಕೃಷಿಗೆ 7,642 ಕೋಟಿ ರೂ ಮೀಸಲು
• ಕಂದಾಯ ಇಲಾಖೆ – 7,180 ಕೋಟಿ ರೂ ಮೀಸಲು
• ಮಹಿಳಾ ಮತ್ತು ಮಕ್ಕಳ ಕಲ್ಯಾಣ – 5,725 ಕೋಟಿ ರೂ ಮೀಸಲು
• ಆರೋಗ್ಯ ಮತ್ತು ಕುಟುಂಬ ಕಲ್ಯಾಣಕ್ಕೆ 9,317 ಕೋಟಿ ರೂ ಮೀಸಲು
• ವಸತಿ -3,942 ಕೋಟಿ ರೂ ಮೀಸಲು
• ಇತರೆ ಇಲಾಖೆಗಳಿಗೆ 82, 196 ಕೋಟಿ ಅನುದಾನ