ಬೆಂಗಳೂರು: ಸುಮಾರು ಎಂಟು ವರ್ಷದ ಬಳಿಕ ಬ್ರಾಹ್ಮಣ ಸಮುದಾಯಕ್ಕೆ ಮತ್ತೆ ಕೆಪಿಸಿಸಿ ಅಧ್ಯಕ್ಷ ಪಟ್ಟ ಸಿಕ್ಕಿದೆ. ಮುಂದಿನ ಲೋಕಸಭಾ ಚುನಾವಣೆ ಮತ್ತು ಜಾತಿವಾರು ಲೆಕ್ಕಚಾರ ನೋಡಿಕೊಂಡು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.ಈ ಮೊದಲು ಕಳೆದ 2010 ರಲ್ಲಿ ಆರ್.ವಿ ದೇಶಪಾಂಡೆ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಇದಕ್ಕೂ ಮೊದಲು 95 ರಲ್ಲಿ ವಿ.ಕೃಷ್ಣರಾವ್ ಅವರು ಅಧ್ಯಕ್ಷರಾಗಿದ್ದರು. ಈಗ ಸುಮಾರು 8 ವರ್ಷದ ನಂತರ ಬ್ರಾಹ್ಮಣ ಸಮುದಾಯದ ವ್ಯಕ್ತಿಗೆ ರಾಜ್ಯ ಕಾಂಗ್ರೆಸ್ ಪಟ್ಟ ಸಿಕ್ಕಂತಾಗಿದೆ.

ಇದರ ಜೊತೆಗೆ ಲಿಂಗಾಯಿತ ಸಮುದಾಯದಲ್ಲಿ ತನ್ನದೇ ಆದ ಪ್ರಭಾವ ಬೆಳೆಸಿಕೊಂಡಿರುವ ಮಾಜಿ ಸಚಿವ ಭೀಮಣ್ಣ ಖಂಡ್ರೆ ಅವರ ಪುತ್ರ ಈಶ್ವರ ಖಂಡ್ರೆ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿಯೂ ನೇಮಕ ಮಾಡಿ ಪ್ರಾದೇಶಿಕ ಸಮತೋಲನ ಸಾಧಿಸುವುದರ ಜೊತೆಗೆ ಜಾತಿ ಲೆಕ್ಕಾಚಾರನೂ ಅಡಗಿದೆ ಎನ್ನುತ್ತಿದ್ದಾರೆ.
ಇತ್ತ ಇದುವರೆಗೆ ಕಾರ್ಯನಿರ್ವಹಿಸಿದ ಡಾ. ಜಿ. ಪರಮೇಶ್ವರ್ ಅವರು ಕೆಪಿಸಿಸಿ ಅಧಕ್ಷರಾಗಿ ಯಾರು ಬರೆಯಲಾಗದ ಹೊಸ ದಾಖಲೆ ಬರೆದಿದ್ದಾರೆ 8 ವರ್ಷಗಳ ಕಾಲ ಅಧ್ಯಕ್ಷರಾಗಿ ಕೆಲಸ ಮಾಡಿ, ಎರಡು ಸಾರ್ವತ್ರಿಕ ಚುನಾವಣೆ ಎದುರಿಸಿ, ಮೊದಲು ತಾವು ಸೋತು, ನಂತರ ಕಳೆದ ಚುನಾವಣೆಯಲ್ಲಿ ಗೆದ್ದು ಈಗ ಡಿಸಿಎಂ ಅಗಿದ್ದಾರೆ.