ಕರ್ನಾಟಕ ರಾಜ್ಯ ಧನಗರ ಗೌಳಿ ಯುವ ಒಕ್ಕೂಟ (ರಿ.)ದಿಂದ
ಪ್ರತಿಭಾ ಪುರಸ್ಕಾರ ಸಮಾರಂಭ
ಮುಂಡಗೋಡ : ಧನಗರ ಗೌಳಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಸ್ತುತ ಸಾಲಿನ ರಾಜ್ಯಮಟ್ಟದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಮುಂಡಗೋಡ ತಾಲೂಕಿನ ದೈವಜ್ಞ ಸಭಾ ಭವನದಲ್ಲಿ ಜುಲೈ 8ರಂದು ಭಾನುವಾರ ಆಯೋಜಿಸಿದೆ ಎಂದು ಕರ್ನಾಟಕ ರಾಜ್ಯ ಧನಗರ ಗೌಳಿ ಯುವ ಒಕ್ಕೂಟದ ಅಧ್ಯಕ್ಷರಾದ ಸಿದ್ದು ಬಮ್ಮು ಥೋರತ್ ಹೇಳಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಧನಗರ ಗೌಳಿ ಸಮಾಜದ 10ನೇ ತರಗತಿಯಲ್ಲಿ ಶೇ. 85 ಹಾಗು ಪಿಯುಸಿಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ರಾಜ್ಯಮಟ್ಟದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.
ಕರ್ನಾಟಕ ರಾಜ್ಯ ಧನಗರ ಗೌಳಿ ಯುವ ಒಕ್ಕೂಟ ಸಮಾಜದ ಸರ್ವಾಂಗೀಣ ಅಭ್ಯುದಯ, ಜಾಗೃತಿ, ಯುವ ಸಬಲೀಕರಣ, ಶೈಕ್ಷಣಿಕ ಸಬಲೀಕರಣ, ಸಮಾಜದ ಹಿತರಕ್ಷಣೆ, ಧಾರ್ಮಿಕ-ಸಾಂಸ್ಕøತಿಕ ಸಂರಕ್ಷಣೆ, ಸಂಘಟನೆ-ಚಳುವಳಿ, ಮಾದ್ಯಮ (ಪ್ರಸಾರ-ಪ್ರಚಾರ), ಸಮುದಾಯದ ಸಂಶೋಧನೆ ಹೀಗೆ ಹಲವಾರು ಧ್ಯೇಯ ಸಾಧನೆಗಾಗಿ ಕೆಲಸ ಮಾಡುತ್ತಿದ್ದು, ವಿದ್ಯಾರ್ಥಿ ಹಾಗೂ ಪೋಷಕರಲ್ಲಿ ಶೈಕ್ಷಣಿಕ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಸಮಾರಂಭ ಆಯೋಜಿಸಲಾಗುತ್ತಿದೆ.
ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ತೀರಾ ಹಿಂದುಳಿದಿರುವ ಅಸಂಘಟಿತ ಸಮಾಜವಾಗಿದೆ. ಸ್ವತಂತ್ರ ಭಾರತದಲ್ಲಿ ಧನಗರ ಗೌಳಿ ಸಮುದಾಯಕ್ಕೆ ಸರ್ಕಾರದ ವರ್ಗಿಕೃತ ಪಟ್ಟಿಯಲ್ಲಿ ಒಂದು ಸ್ವತಂತ್ರ ಅಸ್ತಿತ್ವ ಹಾಗೂ ಸಮುದಾಯಕ್ಕೆ ಗುರುತು ಇಲ್ಲವೆಂದರೆ ಅದು ನಮ್ಮ ಘನ ಸರ್ಕಾರಗಳಿಗೆ ಅಂಟಿರುವ ಕಳಂಕ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜದ ಪರಿವರ್ತನೆ ಶಿಕ್ಷಣದಿಂದ ಮಾತ್ರ ಸಾಧ್ಯವಾಗಿದ್ದು, ವಿದ್ಯಾರ್ಥಿ ಹಾಗು ಪಾಲಕರಲ್ಲಿ ಶೈಕ್ಷಣಿಕ ಅರಿವು ಮೂಡಿಸಿ ಪ್ರೋತ್ಸಾಹಿಸಲು ಒಕ್ಕೂಟ ಪ್ರಾರಂಭದಿಂದ ಪ್ರತಿವರ್ಷ ಪ್ರತಿಭಾವಂತ ‘ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ’ ಕೈಗೊಳ್ಳುತ್ತಾ ಬಂದಿದೆ ಎಂದು ಮುಂಡಗೋಡÀ ಘಟಕದ ಕಾರ್ಯದರ್ಶಿ ಭಾಗು ಕಾತ್ರಟ್ ಹೇಳಿದರು.
ಈ ಬಾರಿ ನಾಲ್ಕನೇ ವರ್ಷದ ‘ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ’ವನ್ನು ಒಕ್ಕೂಟವೂ ದಿನಾಂಕ 08-7-2018, ಭಾನುವಾರದಂದು ಮುಂಡಗೋಡಿನ ದೈವಜ್ಞ ಸಭಾ ಭವನದಲ್ಲಿ ಆಯೋಜಿಸಿದೆ. 10ನೇ ತರಗತಿಯಲ್ಲಿ ಶೇ. 85 ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ. 80 ಮತ್ತು ಅದಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿರುವ ವಿದ್ಯಾರ್ಥಿಗಳನ್ನು ಅಭಿನಂದಿಸಲು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಒಕ್ಕೂಟ ನಿಶ್ಚಯಿಸಿರುತ್ತದೆ. ಈ ಬಾರಿ ರಾಜ್ಯದಿಂದ 30 ವಿದ್ಯಾರ್ಥಿಗಳು ಹಾಗೂ ಒಬ್ಬರೂ ಪಿ.ಎಚ್.ಡಿ ಪದವಿಧರರು ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ ಎಂದು ಭಾಗು ಕಾತ್ರಟ್
ಪತ್ರಿಕಾಗೋಷ್ಠಿಯಲ್ಲಿ ಮುಂಡಗೋಡ ಘಟಕದ ಉಪಾಧ್ಯಕ್ಷರಾದ ಕೇದಾರಿ ಶೇಳಕೆ, ಸಂಘಟನಾ ಕಾರ್ಯದರ್ಶಿ ರಾಮು ಥೋರತ್ ಉಪಸ್ಥಿತರಿದ್ದರು.