ವಿದ್ಯಾವಂತ ಯುವಕರಿಗೆ ಮಾದರಿಯಾದ ಪ್ರಗತಿಪರ ಕೃಷಿಕ ವೀರೇಶ್ ಮಹಾದೇವ್ ನಾಯ್ಕ್:
ದುಡಿಯುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಸಾಧನೆ ಸಹನೆಯೊಂದಿಗೆ ಮಾಡುವ ಸತತ ವಿನೂತನ ಪ್ರಯತ್ನದ ಫಲವೆಂದು ಸಾಧಿಸಿ ತೋರಿಸಿದ ಹೆಗ್ಗಳಿಕೆ ಯುವ ಕೃಷಿಕ ವೀರೇಶ ನಾಯ್ಕರದ್ದು. ಧಾರವಾಡದಲ್ಲಿ ವಾಸಿಸುವ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಮಹಾದೇವ್ ನಾಯ್ಕ್ ಹಾಗು ಶ್ರೀಮತಿ ಶ್ಯಾಮಲಾ ನಾಯ್ಕ್ ದಂಪತಿಗಳ ಏಕಮೇವ ಅದ್ವಿತೀಯ ಎನ್ನುವಂತೆ ಏಕೈಕ ಪುತ್ರ ವೀರೇಶ್ ಮಹಾದೇವ್ ನಾಯ್ಕ್ ರವರು ೦೯/೦೮/೧೯೮೪ ರಲ್ಲಿ ಜನಿಸಿದರು.

ತಮ್ಮ ಪ್ರಾಥಮಿಕ ಶಿಕ್ಷಣವನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಮುಗಿಸಿ ಮಾಧ್ಯಮಿಕ ಹಾಗು ಪದವಿ ಶಿಕ್ಷಣವನ್ನು ಧಾರವಾಡದಲ್ಲಿ ಪೂರೈಸಿದರು. ಇಂಡಿಯನ್ ಇನ್ಸ್ಟಿಟ್ಯೂಟ್ ಒಫ್ ಪ್ಲಾನಿಂಗ್ ಅಂಡ್ ಮ್ಯಾನೇಜ್ಮೆಂಟ್ (ಐ ಐ ಪಿ ಎಂ) ದೆಹಲಿಯಲ್ಲಿ ವೃತ್ತಿಪರ ಸ್ನಾತಕೋತ್ತರ ಪದವಿ ಎಂ ಬಿ ಎ (ಮಾಸ್ಟರ್ ಒಫ್ ಬಿಸಿನೆಸ್ ಮ್ಯಾನೇಜ್ಮೆಂಟ್) ನಲ್ಲಿ ಉನ್ನತ ಶ್ರೇಯಾಂಕದೊಂದಿಗೆ ಉತ್ತೀರ್ಣರಾದರು.

ಭಾರತದ ಅತ್ಯಂತ ಕ್ಲಿಷ್ಟಕರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೊಂದಾದ ಭಾರತೀಯ ಆಡಳಿತ ಸೇವೆ (ಐ ಎ ಎಸ ) ಪರೀಕ್ಷೆಯನ್ನು ಎದುರಿಸಿ ಪ್ರೆಲಿಮ್ಸ್ ಹಂತವನ್ನು ಯಶಸ್ವಿಯಾಗಿ ಮುಗಿಸಿ ಮೈನ್ಸ್ ನಲ್ಲಿ ಸಂದರ್ಶನದ ವರೆಗೆ ತಲುಪಿ ಈ ಹಂತದಲ್ಲಿ ವಿದೇಶಗಳಲ್ಲಿನ ಕೃಷಿ ಪದ್ಧತಿ ಹಾಗು ಅದರ ಮಹತ್ವ ಮತ್ತು ಆಧುನಿಕ ತಂತ್ರಜ್ಞಾನದ ಬಳಕೆ ಇವುಗಳ ಕುರಿತು ಆಳವಾದ ಅಧ್ಯಯನ ಮತ್ತು ಮಾಹಿತಿ ಸಂಗ್ರಹಿಸಿ ಸಹಜವಾಗಿಯೇ ಕೃಷಿಯತ್ತ ಆಕರ್ಷಿತರಾಗಿ ದೇಶದ ಬೆನ್ನೆಲುಬಾದ ಕೃಷಿಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು ಆಧುನಿಕ ಕೃಷಿಯಲ್ಲಿ ತನ್ನ ತಾಯ್ನಾಡಿನಲ್ಲಿಯೇ ಮಹತ್ವಪೂರ್ಣವಾದ ಅಸಾಧಾರಣ ಸಾಧನೆಗೊಂಡು ಅಡಿಗಲ್ಲನ್ನಿಡುವ ದ್ರಢ ಸಂಕಲ್ಪದೊಂದಿಗೆ ದೆಹಲಿಯಿಂದ ತಾಯ್ನಾಡಾದ ಕರುನಾಡಿಗೆ ಆಗಮಿಸಿ ಕೃಷಿಯತ್ತ ದಿಟ್ಟ ಹೆಜ್ಜೆಯನ್ನಿಟ್ಟರು.

ಚಿತ್ತ ಕೃಷಿಯತ್ತ ವಾಲಿರಲು ಸ್ವಯಾರ್ಜಿತವಾದ ಹಾಗು ಜಿಲ್ಲೆಯ ಬೇರೆ ಬೇರೆ ಮಣ್ಣು ಹಾಗು ಹವಾಮಾನದಲ್ಲಿ ಬೆಳೆಯುವ ಬೆಳೆಗಳನ್ನು ಬೆಳೆಸುವ ಉದ್ದೇಶದಿಂದ ಜಿಲ್ಲೆಯ ಇನ್ನುಳಿದ ತಾಲೂಕಿನ ಜಮೀನಿನಲ್ಲಿ ಪರೀಕ್ಷಾರ್ಥವಾಗಿ ಉಳುಮೆ ಮಾಡುವ ಪಣ ತೊಟ್ಟು ಅದರಿಂದ ಯಶಸ್ವಿಯಾಗಿ ನಿರೀಕ್ಷಿತ ಫಸಲನ್ನು ಪಡೆದು ಅದನ್ನೇ ಇನ್ನು ದೊಡ್ಡ ಹಂತದಲ್ಲಿ ಮಾಡುವ ಯೋಜನೆಯೊಂದಿಗೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ೧೦ ಎಕರೆ, ಉಳವಿಯಲ್ಲಿ ೧೫ ಎಕರೆ, ಕುಡ್ಲಗದ್ದೆಯಲ್ಲಿ ೭ ಎಕರೆ ಒಟ್ಟು ಸರಿಸುಮಾರು 32 ಎಕರೆ ಪ್ರದೇಶದಲ್ಲಿ ತಮ್ಮ ಅದ್ರಷ್ಟ ಪರೀಕ್ಷಗೆ ಮುಂದಾದರು. ನಂಬಿದವರನ್ನು ಎಂದು ಕೈ ಬಿಡದ ಭೂಮಾತೆ ಅವರ ನಿರೀಕ್ಷೆಗೂ ಮೀರಿದ ಇಳುವರಿಯನ್ನು ಪ್ರತಿಫಲವನ್ನಾಗಿ ನೀಡಿತು ಇದರಿಂದ ಉತ್ತೇಜಿತರಾಗಿ ತೋಟಗಾರರಿಕೆಯನ್ನು ಪ್ರಾಥಮಿಕ ಉದ್ಯೋಗವನ್ನಾಗಿಸಿಕೊಂಡು ” ಗಂಗಾ ಸಸ್ಯ ಪಾಲನಾಲಯ” ಎಂಬ ಹೆಸರಿನೊಂದಿಗೆ ಹಲವಾರು ತಳಿಯ ಸಸ್ಯಗಳಾದ ಸುಧಾರಿತ ತೆಂಗು, ಅಡಿಕೆ, ಬಾಳೆ, ಕಸಿ ಮಾಡಿದ ಮಾವು, ಹಲಸು, ಗೇರು, ಚಿಕ್ಕು, ಲಿಂಬು, ಕಾಳಮೆಣಸು, ಏಲಕ್ಕಿ, ಶುಂಠಿ, ಪೇರಳೆ,ಅರಿಸಿನ ಎಲೆಬಳ್ಳಿ, ಹಾಗು ಹಲವಾರು ಔಷಧಿ ಸಸ್ಯಗಳನ್ನು ಉತ್ಕ್ರಷ್ಟ ಗುಣಮಟ್ಟದೊಂದಿಗೆ ಬೆಳೆದು ಅದರ ಮಹತ್ವವನ್ನು ಹಾಗು ಈ ಎಲ್ಲ ತಳಿಗಳ ಸಂರಕ್ಷಣೆ ಮತ್ತು ಕಡಿಮೆ ದರದಲ್ಲಿ ರೈತರಿಗೆ ವಿತರಣೆ ಮಾಡುವುದರ ಮೂಲಕ ಸಸ್ಯ ಕಾಶಿಯನ್ನೇ ಹುಟ್ಟು ಹಾಕುವ ಮೂಲಕ ಜಿಲ್ಲೆಯಲ್ಲಿ ಹಸಿರು ಕ್ರಾಂತಿಗೆ ಯುವ ಕೃಷಿಕರಾಗಿ ಅಭೂತಪೂರ್ವವಾದ ಮುನ್ನುಡಿಯನ್ನು ಬರೆಯಲಾರಂಭಿಸಿದರು.

ಜಗತ್ತಿನಲ್ಲಿಯೇ ಕೃಷಿಯಲ್ಲಿ ಅಭೂತಪೂರ್ವ ಸಾಧನೆ ಮಾಡಿದ ಕೃಷಿಯಲ್ಲಿ ಜಗತ್ತಿನಲ್ಲಿಯೇ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡ ಚಿಕ್ಕ ರಾಷ್ಟ್ರ ಇಸ್ರೇಲ್ ಆ ಇಸ್ರೇಲ್ ಮಾದರಿಯಲ್ಲಿ ಅತ್ಯುತ್ಕ್ರಷ್ಟ ಗುಣಮಟ್ಟದ ಬೆಳೆಯನ್ನು ಕಡಿಮೆ ನೀರಿನೊಂದಿಗೆ ಸ್ಥಳೀಯವಾಗಿ ಲಭ್ಯವಿರುವ ಗೊಬ್ಬರದೊಂದಿಗೆ ಸಾವಯವ ಕೃಷಿ ಪದ್ದತಿಯನ್ನು ಅನುಸರಿಸಿ ಭೂಮಿಯ ಫಲವತ್ತತೆಗೆ ಯಾವುದೇ ಕೊರತೆಯಾಗದಂತೆ ಪ್ರತಿ ಬೆಳೆಗೂ ಮತ್ತು ಅಲ್ಲಿನ ಹವಾಮಾನ ಹಾಗು ಮಣ್ಣಿನ ಫಲವತ್ತತೆಯನ್ನು ಅನುಸರಿಸಿ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಇಳುವರಿಯನ್ನು ದ್ವಿಗುಣಗೊಳಿಸುವುದರ ಕುರಿತು ಧೀರ್ಘವಾಗಿ ಅಭ್ಯಸಿಸಿ ಸಾಮಾಜಿಕ ಜಾಲ ತಾಣಗಳಾದ ಫೇಸ್ಬುಕ್ ಯುಟ್ಯೂಬ್ ಗಳಲ್ಲಿ ಈ ವಿಷಯಗಳಲ್ಲಿ ಹೆಚ್ಚಿನ ಮಾಹಿತಿ ಸಂಗ್ರಹಿಸಿ ಅದನ್ನು ತನ್ನ ತಾಯ್ನಾಡಿನ ಮಣ್ಣಿನಲ್ಲಿ ಬಂಗಾರದ ಬೆಳೆ ಬೆಳೆದ ” ಬಂಗಾರದ ಮನುಷ್ಯ” ಎಂದರು ಅತಿಶಯೋಕ್ತಿಯಾಗಲಾರದು.

ಈ ಕಾರ್ಯದಲ್ಲಿ ನಿವೃತ್ತ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಪಡೆದ ಅನುಭವದ ಸಾರವನ್ನು ಎಳೆ ಎಳೆಯಾಗಿ ಮಗನಿಗೆ ಧಾರೆಯೆರೆದು ಅವರನ್ನು ಮಾದರಿ ಯುವ ಕ್ರಷಿಕನನ್ನಾಗಿಸುವಲ್ಲಿ ತಂದೆಯಾದ ಶ್ರೀ ಮಹಾದೇವ್ ನಾಯ್ಕ್ ರವರ ಪಾತ್ರವೂ ಅಷ್ಟೇ ಮಹತ್ವಪೂರ್ಣದ್ದಾಗಿದೆ ಹಾಗೆಯೇ ಮಾತೆಯಾಗಿ ಶ್ರೀಮತಿ ಶ್ಯಾಮಲಾ ಮಹಾದೇವ ನಾಯ್ಕ್ ಮಗನ ಮನೋಧೈರ್ಯಕ್ಕೆ ಮಮತೆಯ ಬೆಳಕಾಗಿ ಹಾಗು ವಿಶ್ವಾಸದ ಸ್ಪೂರ್ತಿಯಾಗಿ ಯಶಸ್ವೀ ಯುವ ಕ್ರಷಿಕನಾಗಿಸುವಲ್ಲಿ ನೆಮ್ಮದಿಯನ್ನು ಕಂಡಿದ್ದಾರೆ. ಅನಂತಾನಂತ ಯುವಕರಿಗೆ, ನೂರಾರು ರೈತರಿಗೆ, ಶ್ರಮಿಕರಿಗೆ ನೂರಾರು ಕೃಷಿ ಕಾರ್ಮಿಕರಿಗೆ ಪ್ರತ್ಯಕ್ಷವಾಗಿ ಹಾಗು ಪರೋಕ್ಷವಾಗಿ ಉದ್ಯೋಗವನ್ನು ನೀಡಿದ್ದಾರೆ ಮತ್ತು ಉತ್ತಮ ದುಡಿಮೆಯ ಮೂಲವೇ ಕೃಷಿ ಎನ್ನುವುದನ್ನು ಮನದಟ್ಟಾಗಿಸಿದ್ದಾರೆ ಉದ್ಯೋಗ ಹುಡುಕಿ ಕಾಂಕ್ರೀಟ್ ಕಾಡಿನತ್ತ ಮುಖ ಮಾಡುವ ಅದೆಷ್ಟೋ ಯುವಕರಿಗೆ ತಮ್ಮ ತಾಯ್ನಾಡಿನ ಮಣ್ಣಿನ ಸೊಗಡಿನ ಮಹತ್ವವನ್ನು ತೋರಿಸಿ ಕೈಯಲ್ಲಿರುವ ದುಡಿಮೆಯ ಮಹತ್ವವನ್ನು ತಿಳಿಸಿ ಹೇಳುವ ಮುಖೇನ “ಮನಸೊಂದಿದ್ದರೆ ಮಾರ್ಗವು ಹಲವು ದುಡಿಮೆಯ ನಂಬಿ ಬದುಕು ಅದರಲೇ ದೇವರ ಹುಡುಕು ಬಾಳಲಿ ಬರುವುದು ಬೆಳೆಕು” ಎಂದು ಸಾರಿ ಸಾರಿ ಹೇಳುತ್ತಿದೆ ಅವರ ಸಾಧನೆ.

ಅವರ ಸಾಧನೆಯ ಯಶೋಗಾಥೆಯ ಕಿರೀಟಕ್ಕೊಂದು ಗರಿಎಂಬಂತೆ “ಮಿನುಗುವ ಚುಕ್ಕಿ ಕಲ್ಚರಲ್ ಅಕಾಡೆಮಿ” ಕನ್ನಡ ದಿನಪತ್ರಿಕೆ ವತಿಯಿಂದ ಶ್ರೀಯುತರ ಕೃಷಿ ಕ್ಷೇತ್ರದ ಕೊಡುಗೆಯನ್ನು ಗಮನಿಸಿ ಅವರ ಈ ಸಾಧನೆಯನ್ನು ಪ್ರೋತ್ಸಾಹಿಸಿ ದೇಶದ ಮಾಜಿ ಪ್ರಧಾನಿಗಳೂ ಹಾಗು ಕರ್ನಾಟಕದ ಮಣ್ಣಿನ ಮಗನೆಂದೇ ಖ್ಯಾತಿಯಾದ ಶ್ರೀ ಎಚ್ ಡಿ ದೇವೇಗೌಡ ರಿಂದ ಪ್ರಶಸ್ತಿ ಸ್ವೀಕರಿಸಲಿರುವರು ಹಾಗೂ ಮಾಜಿ ಪ್ರಧಾನಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವ ಮುಂದಿನ ದಿನಗಳಲ್ಲಿ ಕೃಷಿಗೆ ಉತ್ತೇಜನ ನೀಡುವ ಯುವ ವಿದ್ಯಾವಂತ ಯುವ ಕೃಷಿಕ ಶ್ರೀ ವೀರೇಶ್ ಮಹಾದೇವ ನಾಯ್ಕ್ ರಂತಹವರನ್ನು ಇನ್ನು ಹತ್ತು ಹಲವಾರು ಪ್ರಶಸ್ತಿಗಳು ಹುಡುಕಿಕೊಂಡು ಬರಲಿ ಹಾಗೆಯೇ ಸರ್ಕಾರವೂ ಇಂತಹ ಸಾಧಕರನ್ನು ಗುರುತಿಸಿ ಗೌರವಿಸಲಿ ಎಂಬುದೇ ನಮ್ಮ ಆಶಯ. ಶ್ರೀಯುತ ವೀರೇಶ್ ಮಹಾದೇವ್ ನಾಯ್ಕ್ ರವರನ್ನು ಸಂಪರ್ಕಿಸಬಹುದಾದ ಮೊಬೈಲ್ ಸಂಖ್ಯೆ 9743565758