ಮಣ್ಣ ಮಾತು ಕೇಳು..
ಮಣ್ಣೊಳಗೆ ಏನಿಹುದು..
ಕಣ್ತೆರೆದು ನೋಡೊಮ್ಮೆ..
ಹಸಿರಲ್ಲ ಉಸಿರೆಮದು
ಮಾತುಕೇಳು..
ಬಗೆಬಗೆಯ ಬಣ್ಣಗಳ..
ಹಣ್ಣು ಹೂವುಗಳೆಲ್ಲ..
ಬಗೆದು ಮೇಲಕೆ ಕೊಡುವ.
ನಾನು ಮಣ್ಣು.
ಖಾರದಾ ಖರೆಯಿಹುದು..
ನಾರಿನಾ ನೀರಿಹುದು..
ನೂರು ಸಾರವು ನಿನಗೆ..
ನಾನು ಮಣ್ಣು..
ನೂರು ಹಸಿರಿನ ಬಗೆಯು..
ನೂರು ನಾಲಿಗೆ ರುಚಿಯು..
ನೂರು ಕಣ್ಣಿಗೆ ತಂಪು..
ನಾನು ಮಣ್ಣು..
ಉಣುವ ಅನ್ನವು ನಾನು..
ತೊಡುವ ಚಿನ್ನವು ನಾನು..
ಸುಡುವ ಪಾತ್ರೆಯು ನಾನು
ನಾನು ಮಣ್ಣು.
ಉಳಿವ ಮನೆಯು ನಾನು..
ತಳೆವ ದಾರಿಯು ನಾನು..
ನೀರರಾಶಿಯ ಪಾತ್ರೆ ..
ನಾನು ಮಣ್ಣು..
ಮಲಗು ಮಂಚವು ನಾನು..
ಕಲೆಯ ಕಂಚುಕ ಮಾನು
ಕಂಚು ಕಾವಲಿ ನಾನು..
ನಾನು ಮಣ್ಣು..
ಅಡಿಗೆ ಮನೆಯಲಿ ನಾನು
ಉಡುವ ಉಡಿಗೆಯು ನಾನು..
ಮಡಿಯೆ ಮಡಿಲು ನಾನು..
ನಾನು ಮಣ್ಣು.
ತಿಗಣೇಶ ಮಾಗೋಡ.(9343596619)