ಕರ್ನಾಟಕ ಜರ್ನಲಿಷ್ಟ ಯೂನಿಯನ್ ಕುಮಟಾ ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ. ವಿಧ್ಯಾರ್ಥಿಗಳಿಗೆ ಪತ್ರಿಕಾ ಕಾನೂನಿನ ಅರಿವು. ” ರಾಷ್ಟ್ರದ ಪ್ರಗತಿಯಲ್ಲಿ ಮಾಧ್ಯಮಗಳ ಪಾತ್ರ ” ಭಾಷಣ ಸ್ಪರ್ದೆಯ ವಿಜೇತರಿಗೆ “ಬಹುಮಾನ ವಿತರಣಾ ಕಾರ್ಯಕ್ರಮ ಕುಮಟಾ ತಾಲೂಕಿನ ಹೆಗಡೆಯ ಶಾಂತಿಕಾಂಬಾ ಪ್ರೌಡಶಾಲೆಯ ಸಬಾಭವನದಲ್ಲಿ ನೆರವೇರಿತು

ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಕುಮಟಾ ತಾಲೂಕಾ ಅಧ್ಯಕ್ಷರಾದ ಸುಬ್ರಾಯ ಭಟ್ಟ ಅವರು ಸರ್ವರನ್ನೂ ಸ್ವಾಗತಿಸಿದರು
ಕರ್ನಾಟಕ ಜರ್ನಲಿಷ್ಟ ಯೂನಿಯನ್ನನ ಕುಮಟಾ ತಾಲೂಕಾ ಅಧ್ಯಕ್ಷರಾದ ಅನ್ಸಾರ ಶೇಖ ಅವರು ಪತ್ರಿಕೋಧ್ಯಮ ನಡೆದು ಬಂದ ದಾರಿಯನ್ನ ಅಂಕಿಅಂಶಗಳೊಂದಿಗೆ ವಿವರಿಸಿದರು ಅಲ್ಲದೆ ಪತ್ರಿಕಾ ದಿನಾಚರಣೆಯ ಮಹತ್ವವನ್ನ ತಿಳಿಸಿದರು
ಕಾರ್ಯಕ್ರಮದ ಉದ್ಗಾಟನೆಯನ್ನ ಕುಮಟಾ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಪೂರ್ಣಿಮಾ ಎನ್ ಪೈ ಅವರು ನೆರವೇರಿಸಿದರು
ನಂತರ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪತ್ರಿಕೆಗಳ ಮಹತ್ವವನ್ನ ವಿವರಿಸಿದರು ಸುಪ್ರೀಮ್ ಕೋರ್ಟ ನಿರ್ಣಯದಲ್ಲಿ ಪ್ರಜಾಪ್ರಭುತ್ವವನ್ನ ಕಾಯುವ ಕೆಲಸ ಪತ್ರಿಕೋಧ್ಯಮಕ್ಕೆ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ ಎಂದರು ಅಲ್ಲದೇ ಪತ್ರಿಕೋದ್ಯಮ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಅದನ್ನ ಅರಿತು ಪ್ರತಿಯೊಬ್ಬ ಪತ್ರಕರ್ತನೂ ಕಾರ್ಯ ನಿರ್ವಹಿಸಬೇಕು ಎಂದರು
ಶ್ರಿ ಶಾಂತಿಕಾಂಬಾ ಪ್ರೌಡ ಶಾಲೆಯ ಚೇರ್ಮನ್ ರಾದ ಗಜಾನನನ ಗುನಗಾ ಅವರು ಮಾತನಾಡಿ ನಿಷ್ಟಾವಂತ ಪತ್ರಕರ್ತ ಸಮಾಜದ ಒಳಿತಿಗಾಗಿ ದುಷ್ಟಶಕ್ತಿಗಳ ವಿರುದ್ದ ಹೊರಾಟ ಮಾಡುತ್ತಾ ಜೀವಭಯದ ವಾತಾವರಣದಲ್ಲೇ ಬದುಕು ಸಾಗಿಸುತ್ತಾನೆ ಎಂದರು
ವಿಶೇಷ ಉಪನ್ಯಾಸಕರಾಗಿ ಅಗಮಿಸಿದ್ದ ನಾಗರಾಜ ಎನ್ ಹೆಗಡೆಯವರು ಮಾತನಾಡಿ ವೃತ್ತಿ ಧರ್ಮ ಮತ್ತು ಸೈದ್ದಾಂತಿಕ ನಂಬಿಕೆಯನ್ನ ಬೆರೆ ಬೇರೆಯಾಗಿ ಇಟ್ಟು ಕೊಂಡು ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆಯಲ್ಲಿ ಪತ್ರಕರ್ತ ಯಾವತ್ತು ಇರುತ್ತಾನೆ ಎಂದು ಉದಾಹರಣೆಯೊಂದಿಗೆ ವಿವರಿಸಿ ಒಬ್ಬ ಪತ್ರಕರ್ತನಲ್ಲಿರಬೇಕಾದ ಪ್ರಮುಖ ಗುಣಗಳನ್ನ ಹೇಳಿದರು.

ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಅರ್ಚನಾ ಎಂ ಹೆಗಡೆ. ವಿಘ್ನೇಶ ಟಿ ನಾಯ್ಕ .ಕಾವ್ಯಾ ಎಸ್ ಪಟಗಾರ ಇವರಿಗೆ ಬಹುಮಾನ ವಿತರಿಸಲಾಯಿತು ಅಲ್ಲದೆ ಇನ್ನೂ ಹಲವು ವಿಧ್ಯಾರ್ಥಿಗಳಿಗೆ ಪ್ರೋತ್ಸಾಹಕರ ಬಹುಮಾನ ನೀಡಲಾಯಿತು

ಧೀರು ಶಾನಭಾಗ್. ಕುಮಟಾ ತಾಲೂಕಾ ಕ ಸಾ ಪ ಅಧ್ಯಕ್ಷ ಶ್ರೀಧರ ಉಪ್ಪಿನಗಣಪತಿ ಸಭೆಯನ್ನ ಉದ್ದೇಶಿಸಿ ಮಾತನಾಡಿದರು ಪುರುಷೋತ್ತಮ ಹೆಗಡೇಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಹಿರಿಯ ಪತ್ರಕರ್ತ ಎಂ ಜಿ ನಾಯ್ಕ ಅಭಿನಂದಿಸಿದರು ಪತ್ರಕರ್ತ ಚರಣರಾಜ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು