*ಲಾರಿ ಅಫಘಾತ: ಲಾರಿ ಕೆಳಗೆ ಸಿಲುಕಿ ಸೈಕಲ್ ಸವಾರ ಸಾವು* *ಮೃತಪಟ್ಟ ವ್ಯಕ್ತಿ ಮಂಜುನಾಥ ಮಡಿವಾಳ ಬರಗದ್ದೆ ನಿವಾಸಿ*
ಹೊನ್ನಾವರ: ಮಂಗಳೂರಿನಿಂದ ಅಹಮದಾಬಾದ್ ಗೆ ಅಡಿಕೆ ತುಂಬಿಕೊಂಡು ತೆರಳುತ್ತಿದ್ದ ಲಾರಿಯೊಂದು ಅಗ್ರಹಾರ ಬಳಿ ಉರುಳಿ ಬಿದ್ದು ಸೈಕಲ್ ಸವಾರ ಮೃತಪಟ್ಟ ಘಟನೆ ನಡೆದಿದೆ.
ಘಟನೆಯಲ್ಲಿ ಲಾರಿ ಚಾಲಕ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಲಾರಿಯ ಅಡಿಯಲ್ಲಿ ಸೈಕಲ್ ಸವಾರನೊಬ್ಬ ಸಿಲುಕಿ ಮೃತಪಟ್ಟಿದ್ದಾನೆಂದು ವ್ಯಕ್ತಪಡಿಸಿದೆ. ಲಾರಿಯಲ್ಲಿನ ಅಡಿಕೆಯನ್ನ ಖಾಲಿ ಮಾಡಿ, ಲಾರಿಯನ್ನು ಮೇಲಕ್ಕೆತ್ತಿದ ಬಳಿಕ ಸೈಕಲ್ ಸವಾರನನ್ನು ಹೊರತೆಗೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.