ಮಾನ್ಯ ಶ್ರೀ ಕೋಟಾ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್ತಿನ ಸದಸ್ಯರು ಮತ್ತು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರನ್ನು ಅವರ ಬಿ.ಜೆ.ಪಿ. ಕಛೇರಿ, ಕುಂದಾಪುರದಲ್ಲಿ ಇಂದು ಉತ್ತರ ಕನ್ನಡ ಜಿಲ್ಲಾ ಸರಕಾರಿ ಗುತ್ತಿಗೆ ನೌಕರರ ಹೋರಾಟ ಸಂಘದ ಪದಾಧಿಕಾರಿಗಳು ಭೇಟಿ ಮಾಡಲಾಯಿತು. ಬರುವ ಅಧಿವೇಶನದಲ್ಲಿ ಇಡಿ ರಾಜ್ಯದ ಎಲ್ಲಾ ಇಲಾಖೆಯ ಗುತ್ತಿಗೆ ನೌಕರರ ಸಮಸ್ಯೆಯನ್ನು ಪ್ರಸ್ತಾಪಿಸಿ
ಇನ್ನೂ ಮುಂದೆ ಯಾವುದೇ ಗುತ್ತಿಗೆ ನೌಕರರನ್ನು ಏಕಾಏಕಿ ಕೆಲಸದಿಂದ ತೆಗೆಯದಂತೆ ಕ್ರಮವಹಿಸಬೇಕು. ಅಲ್ಲದೇ ಎಲ್ಲಾ
ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ,
ಇಲಾಖೆಯಿಂದಲೇ ವೇತನ ಪಾವತಿ ಏಕರೂಪ ಸೇವಾ ನಿಯಮಾವಳಿ ಹಾಗೂ ಕಾರ್ಮಿಕ ಕಾನೂನುಗಳನ್ನು ಜಾರಿ ಮಾಡಬೇಕೆಂದು ಈ ಮೂಲಕ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮಾರುತಿ ಸಂಕೋಳ್ಳಿ, ಪ್ರಧಾನ ಕಾರ್ಯದರ್ಶಿಯಾದ ನಾಗರಾಜ ನಾಯ್ಕ, ಸಂಘಟನಾ ಕಾರ್ಯದರ್ಶಿಯಾದ ರಾಘವೇಂದ್ರ ಬಾಗಲ್, ನಿರ್ದೇಶಕರಾದ ಶ್ರೀಧರ ಶೆಟ್ಟಿ, ವಿನಾಯಕ ನಾಯ್ಕ, ಯೋಗೇಶ ನಾಯ್ಕ, ಭಾಸ್ಕರ ನಾಯ್ಕ, ನಾಗೇಶ ದೇವಾಡಿಗ, ಮೋಹನ ನಾಯ್ಕ ಮತ್ತಿತರರು ಭಾಗವಹಿಸಿದರು.