ನೆಲಬಾಂಬ್ ಸ್ಪೋಟಗೊಂಡು ಕಾರವಾರ ಮೂಲದ ಯೋಧ ಹುತಾತ್ಮ
ಕಾರವಾರ: ಛತ್ತೀಸ್ಗಢದಲ್ಲಿ ನಕ್ಸಲ್ ವಿರುದ್ಧದ ಕಾರ್ಯಾಚರಣೆ ವೇಳೆ ನೆಲ ಬಾಂಬ್ ಸ್ಪೋಟಗೊಂಡು ಇಬ್ಬರು ಬಿಎಸ್ಎಫ್ ಯೋಧರು ಹುತಾತ್ಮರಾಗಿದ್ದಾರೆ.
ಅದರಲ್ಲಿ ನಗರದ ಕೋಡಿಬಾಗದ ವಿಜಯಾನಂದ ಸುರೇಶ್ ನಾಯ್ಕ (೨೮) ಕೂಡ ಹುತಾತ್ಮರಾದವರಾಗಿದ್ದು, ಅವರೊಂದಿಗೆ ಇದ್ದ ಬೆಳಗಾವಿ ಮೂಲದ ಸಂತೋಷ್ ಗುರವ್ ಕೂಡ ನಕ್ಷಲ್ ಬಾಂಬ್ ಗೆ ಬಲಿಯಾಗಿದ್ದಾರೆ.
೨೦೧೪ರಲ್ಲಿ ಸೈನ್ಯಕ್ಕೆ ಸೇರಿಕೊಂಡಿದ್ದ ಸುರೇಶ್ ಬಿಎಸ್ಎಫ್ ನಲ್ಲಿ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಆದರೆ ಛತ್ತೀಸಗಢದಲ್ಲಿ ನಕ್ಸಲ್ ವಿರುದ್ಧದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿರುವ ವೇಳೆ ಅಡಗಿಸಿಟ್ಟ ನೆಲಬಾಂಬ್ ಸಿಡಿದು ಹುತಾತ್ಮರಾಗಿದ್ದಾರೆ. ವಿಜಯಾನಂದ ನಿವೃತ್ತ ರೆವಿನ್ಯೂ ಇನ್ಸಪೆಕ್ಟೆರ್ ಸುರೇಶ್ ನಾಯ್ಕ ಅವರ ಪುತ್ರ.