ತಾನು ಪ್ರೀತಿಸುತ್ತಿದ್ದ ದಿಲನ್ ಜೊತೆ ನಾನೇ ಹೋಗಿದ್ದೆ ದಿಲನ್ ನನ್ನನ್ನು 7 ವರ್ಷಗಳಿಂದ ಪ್ರೀತಿಸುತ್ತಿದ್ದೆ’: ಅಂಕೋಲಾ ವಿವಾಹಿತೆ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್*
ಅಂಕೋಲಾ:
‘ಏಳು ವರ್ಷಗಳಿಂದ ದಿಲನ್ನನ್ನು ಪ್ರೀತಿಸುತ್ತಿದ್ದ
ೆ. ಈ ಬಗ್ಗೆ ಮನೆಯವರಿಗೂ ತಿಳಿಸಿದ್ದೆ. ಆದರೆ, ಬಲವಂತಾಗಿ ನನ್ನನ್ನು ಸಚಿನ್ ಜತೆ ಮದುವೆ ಮಾಡಿಸಿದ್ದರಿಂದ ನಾನೇ ಅವನ ಜತೆ ಹೋಗಿದ್ದೆ…’ ಎಂದು ನಾಪತ್ತೆಯಾಗಿದ್ದ ನವ ವಿವಾಹಿತೆ ದಿವ್ಯಾ ನಾಯ್ಕ ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ.
ಬಟ್ಟೆ ಹೊಲಿಸಲು ಹೋಗಿ ನಾಪತ್ತೆಯಾಗಿದ್ದ ಅಂಕೋಲಾ ತಾಲ್ಲೂಕಿನ ಅವರ್ಸಾದ ದಿವ್ಯಾ ನಾಯ್ಕ ಮದುವೆಯಾದ ಒಂಬತ್ತನೇ ದಿನಕ್ಕೆ ತವರು ಮನೆಯಿಂದ ನಾಪತ್ತೆಯಾಗಿದ್ದರು. ಅವರ ಪತಿ ಸಚಿನ್ ನಾಯ್ಕ, ಪತ್ನಿಯನ್ನು ಗದಗ ಮೂಲದ ದಿಲನ್ ಎಂಬ ವ್ಯಕ್ತಿ ಅಪಹರಿಸಿರುವುದಾಗಿ ಅಂಕೋಲಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ, ಇದೀಗ ದಿವ್ಯಾ ತಾನು ಒಪ್ಪಿಗೆ ಇದ್ದೇ ಆತನ ಜತೆ ಹೋಗಿರುವುದಾಗಿ ಹೇಳಿಕೆ ನೀಡಿದ್ದಾರೆ.
ಪೊಲೀಸರು ದಿವ್ಯಾಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಹೇಳಿಕೆ ದಾಖಲಿಸಿದ್ದಾರೆ. ಇದರ ಆದೇಶ ಇಂದು ಬರಲಿದ್ದು, ಬಳಿಕ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
ಪತಿಯು ದಿವ್ಯಾಳನ್ನು ಕರೆದೊಯ್ಯಲು ನಿರಾಕರಿಸಿದ್ದು, ತವರು ಮನೆಗೆ ಹೋಗಲು ದಿವ್ಯಾ ನಿರಾಕರಿಸಿದ್ದಾರೆ. ಹೀಗಾಗಿ ಅಂಕೋಲಾದ ಸಾಂತ್ವನ ಕೇಂದ್ರಕ್ಕೆ ಅವರನ್ನು ಇಡಲಾಗಿದೆ.
ಇಡಲಾಗಿದೆ.