ಒಂದು ಯುನಿಟ್ ರಕ್ತವು ಮೂರು ಜನರ ಪ್ರಾಣ ಉಳಿಸುತ್ತದೆ : ಡಾ.ಪ್ರಭು
ಮುಂಡಗೋಡ : ರಕ್ತದಾನದಿಂದ ಮನಷ್ಯನ ಜೀವ ಉಳಿಯುತ್ತದೆ. ಶಿಬಿರಗಳಲ್ಲಿ ಭಾಗವಹಿಸಿ ಸೇರಿದಂತೆ ರಕ್ತದ ಅವಶ್ಯಕತೆಯಿದ್ದ ಸಂದರ್ಭದಲ್ಲಿಯೂ ನಾವು ರಕ್ತ ನೀಡುವ ಹವ್ಯಾಸವನ್ನು ಬೆಳಸಿಕೊಂಡು ಜೀವ ಉಳಿಸಬೇಕು ಎಂದರು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಡಿ.ಬಸವರಾಜಪ್ಪ ಹೇಳಿದರು
ಅವರು ದಿವ್ಯಸ್ಪಂದನ ಸಮಾಜಿಕ ಸೇವಾ ಸಂಸ್ಥೆ(ಎನ್.ಜಿ.ಒ) ಸರಕಾರಿ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿರುವ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು
ರಕ್ತದ ಕೊರತೆಯಿಂದ ಎಷ್ಟು ಜನರು ಜೀವ ತೆತ್ತುತ್ತಿದ್ದಾರೆ ಮುಖ್ಯವಾಗಿ ಅಪಘಾತಕ್ಕೆ ಇಡಾದ ಮನುಷ್ಯನ ಜೀವ ಉಳಿಸಬೆಕೆಂದರೆ ರಕ್ತವು ಅತ್ಯಾವಶ್ಯವಾಗಿರುತ್ತದೆ. ಇಂತಹ ರಕ್ತದಾನ ಶಿಬಿರ ಏರ್ಪಡಿಸಿ ಜನರ ಪ್ರಾಣವನ್ನು ಉಳಿಸುವ ನಿಟ್ಟಿನಲ್ಲಿ ದಿವ್ಯ ಸ್ಪಂದನ ಸಂಸ್ಥೆಯ ಕಾರ್ಯ ಶ್ಲಾಘಿನಿಯ ಎಂದರು.
ಶಿರಸಿ ರಕ್ತಭಂಡಾರ ದ ಮುಖ್ಯಸ್ಥೆ ಸುಮನ್ ಹೆಗಡೆ ಮಾತನಾಡಿ ಹೆಚ್ಚೆಹೆಚ್ಚು ರಕ್ತದ ಶಿಬಿರಗಳು ನಡೆಯಬೇಕು ಎಂದಾಗ ರಕ್ತ ಸಂಗ್ರಹ ವಾಗುತ್ತದೆ. ರಕ್ತನೇ ಸಂಗ್ರಹವಾಗದೆ ಇದ್ದರೆ ರಕ್ತಭಂಡಾರಗಳು ರಕ್ತಕೊಡುವುದು ಎಲ್ಲಿಂದ ಎಂದರು
ಮುಂಡಗೋಡ ಸರಕಾರಿ ಆಸ್ಪತ್ರೆಯ ಸ್ತ್ರೀರೋಗ ತಜ್ಞ ಮಾತನಾಡಿ ಒಂದು ಯುನಿಟ್ ರಕ್ತವು ಮೂರು ಜನರ ಪ್ರಾಣ ಉಳಿಸುತ್ತದೆ ಎಂದು ವಿಶ್ಲೇಷಿಸಿದರು. ರಕ್ತಕ್ಯಾನ್ಸರ ರೋಗಿಗೆ ಬಿಳಿಯ ರಕ್ತಕಣ, ಬ್ಲಡ್ ಪ್ರೇಶರ್ ಗರ್ಭೀಣಿ ಸ್ತ್ರೀಯರಿಗೆ ಕೆಂಪುರಕ್ತಕಣ ಹಾಗೂ ಡೆಂಗ್ಯೂ ರೋಗಿಗಳಿಗೆ ಪ್ಲೇಟ್ ಲೆಟ್ ರಕ್ತಕಣ ಜೀವ ಉಳಿಸುತ್ತದೆ ಎಂದರು
ದಿವ್ಯ ಸ್ಪಂದನ ಮುಖ್ಯಸ್ಥೆ ವಾಣಿಪ್ರಭು ಮಾತನಾಡಿ ನಾವು ಜನರ ಕೆಲಸ ಕಾರ್ಯಗಳಿಗೆ ಸೇರಿದಂತೆ ಮನುಷ್ಯರ ಜೀವ ಉಳಿಸುವ ಕಾರ್ಯವನ್ನು ಮಾಡಬೇಕು ಎಂದರು. ಮುಂಡಗೋಡ ಸರಕಾರಿ ಆಸ್ಪತ್ರೆಯಲ್ಲಿ ಕಳೆದ ಕೆಲವು ದಿನಗಳಿಂದ ಸರಕಾರಿ ಆರೋಗ್ಯ ಕೆಂದ್ರದಲ್ಲಿ ಹಲವಾರು ರೋಗಿಗಳು ರಕ್ತವಿಲ್ಲದೆ ಹುಬ್ಬಳ್ಳಿ ಶಿರಸಿ ಆಸ್ಪತ್ರೆಗಳಿಗೆ ರವಾನಿಸಲಾ ಯಿತು. ಮುಂಡಗೋಡ ಆಸ್ಪತ್ರೆಯಲ್ಲಿ ರಕ್ತ ಸಂಗ್ರಹವಿದ್ದರೆ ಬಡ ರೋಗಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ ಈ ಉದ್ದೇಶದಿಂದ ನಮ್ಮ ಸಂಸ್ಥೆಯ ವತಿಯಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದೆವೆ. ರಕ್ತದಾನ ಶಿಬಿರದಲ್ಲಿ ಹೆಚ್ಚೆಚ್ಚು ಯುವಕರು ಆರೋಗ್ಯವಂತಸದೃಡ ಇದ್ದವರು ಭಾಗವಹಿಸಿ ರಕ್ತದಾನಮಾಡಿ ಮತ್ತೊಂದು ಜೀವ ಉಳಿಸುವ ಕಾರ್ಯ ನಾವು ಮಾಡೋಣ ಎಂದರು 38ಜನರು ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡಿದರು. ಈ ವೇಳೆ ತಾಲೂಕಾ ವೈದ್ಯಾಧಿಕಾರಿ ಡಾ.ಶಾಂತಾಲಾ, ರಾಧಾಬಾಯಿ ಶಿರಾಲಿ, ಶಾರದಾಬಾಯಿ ರಾಠೋಡ, ವೀಣಾ ರಾಠೋಡ, ರಾಜೇಶ್ವರಿ ಮುಂತಾದವರಿದ್ದರು.