ಬಾಳೆಗುಳಿ ಬಳಿ ಅಫಘಾತ ನಾಲ್ವರಿಗೆ ಗಾಯ*
ಅಂಕೋಲ : ತಾಲೂಕಿನ ಬಾಳೆಗುಳಿಯ ಬಳಿ ಕಾರು ಉರುಳಿ ಕಾರಿನಲ್ಲಿದ್ದ ನಾಲ್ವರು ಗಾಯಗೊಂಡ ಘಟನೆ ಗುರುವಾರ ನಡೆದಿದೆ.
ಕೊಲ್ಕತ್ತಾದ ಬಿಸ್ವಾಸ, ಮತ್ತು ಶಿಲ್ಪಿ ಹಾಗೂ ಹೈದ್ರಾಬಾದನ ಶಿಕಾ, ಓರಿಸ್ಸಾದ ನೀರಜ್ ಗಾಯಗೊಂಡವರಾಗಿದ್ದಾರೆ.
ಇವರು ತಮ್ಮ ಊರಿನಿಂದ ಗೋವಾ ಪ್ರವಾಸಕ್ಕೆ ಬಂದಿದ್ದರು. ಅಲ್ಲಿ ಬಾಡಿಗೆ ಕಾರನ್ನು ಪಡೆದು ಗೋಕರ್ಣ ಪ್ರವಾಸ ಮುಗಿಸಿ ಗೋವಾಕ್ಕೆ ಮರಳುವಾಗ ಅಂಕೋಲಾ ಬಾಳೆಗುಳಿ ಬಳಿ ಈ ಅಫಘಾತ ಸಂಭವಿಸಿದೆ. ಗಾಯಗೊಂಡವರನ್ನು ಅಂಕೋಲಾ ತಾಲೂಕಾಸ್ಪತ್ರೆಗೆ ಸೇರಿಸಲಾಗಿದೆ. ಪೊಲೀಸ ಪ್ರಕರಣ ದಾಖಲಾಗಿದೆ.