ಕುಮಟಾ ಗೋಕರ್ಣದ ಹಿರೇಗುತ್ತಿ ಯಲ್ಲಿ ಬ್ರಹ್ಮ ಜಟಕ ದೇವಸ್ಥಾನದ ಬಳಿ ಅಂಡರ ಪಾಸ್ ನಿರ್ಮಾಣ ವಿರೋಧಿಸಿ, ಅಂಡರ್ ಪಾಸ್ ಬೇಡವೆನ್ನುವ ಬಗ್ಗೆ ಊರಿನ ಹಿರಿಯ ನಾಗರಿಕರ ಸಭೆಯಲ್ಲಿ ಒಕ್ಕೊರಲಿನಿಂದ ನಿರ್ಣಯ ತೆಗೆದುಕೊಂಡ ಊರ ನಾಗರೀಕರು, ಸನ್ಮಾನ್ಯ ಅರ್.ವಿ.ದೇಶಪಾಂಡೆ ಅವರಲ್ಲಿ ಮನವಿ ಸಲ್ಲಿಸಿದರು, ಮನವಿಯನ್ನು ಸ್ವೀಕರಿಸಿದ ಅರ್.ವಿ.ದೇಶಪಾಂಡೆ, ಡಿ.ಸಿ ಅವರಲ್ಲಿ ಇದರ ಬಗ್ಗೆ ಚರ್ಚಿಸಿ ಮುಂದಿನ ಕ್ರಮಕ್ಕೆ ಆಗ್ರಹಿಸುವುದಾಗಿ ಭರವಸೆಯನ್ನು ನೀಡಿದರು. ಹಿರೇಗುತ್ತಿ ಬ್ರಹ್ಮ ಜಟಕ ದೇವಸ್ಥಾನದ ಬಳಿ ಅಂಡರ ಪಾಸ್ ನಿರ್ಮಾಣ ವಿರೋಧ ಹೋರಾಟಗಾರು ಹಾಗೂ ಊರನಾಗರೀಕರು, ಮಾನ್ಯ ಡಿ.ಸಿ ಯವರನ್ನು ಭೇಟಿಯಾಗಿ ಲಿಖಿತ ಮನವಿಯನ್ನು ಸಲ್ಲಿಸಲು ನಿರ್ಧರಿಸಿದರು..