ನೆಲ್ಲಿಕೇರಿ ಪ್ರೌಢಶಾಲೆ ಯಲ್ಲಿ ವನಮಹೋತ್ಸವ & ವಿಪತ್ತು ನಿರ್ವಹಣಾ ಸಂಘ ಉದ್ಘಾಟನೆ.
ಕುಮಟಾದ ನೆಲ್ಲಿಕೆರಿ ಪ್ರೌಡಶಾಲೆ ಯಲ್ಲಿ ಸೋಮವಾರ ಗಿಡ ನೆಡುವುದರ ಮೂಲಕ ಅರ್ಥಪೂರ್ಣವಾಗಿ ವನಮಹೋತ್ಸವ ಆಚರಿಸಲಾಯಿತು. ವೈದ್ಯರಾದ ಡಾ.ನಾಗರಾಜ ಭಟ್ ವಿಪತ್ತು ನಿರ್ವಹಣಾ ಸಂಘ ಉದ್ಘಾಟಿಸಿ ವನಮಹೋತ್ಸವದ ಪ್ರಾಮುಖ್ಯತೆ ವಿವರಿಸಿದರು. ಮರವು ಹುಟ್ಟಿನಿಂದ ಹಿಡಿದು ಕೊನೆಯವರೆಗೂ ಮಾನವನಿಗೆ ಸಹಾಯಕಾರಿ ಆಗಿದೆ. ಮರಗಳು ವಾತಾವರಣದ ಶುದ್ಧತೆಗೆ ಕಾರಣವಾಗಿದೆ, ವಾತಾವರಣ ಶುದ್ಧವಾಗಿ ಅದರ ಮೂಲಕ ಆರೋಗ್ಯ ಶುದ್ಧವಾಗುತ್ತದೆ ಎಂದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಭಾರತಿ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕರಾದ ಶ್ರೀ ಬೀರದಾಸ್ ಕಾರ್ಯಕ್ರಮ ಸಂಘಟಿಸಿದರು. ಶಾಲಾ ಸಹಶಿಕ್ಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.