ಹೆಲಿಕಾಪ್ಟರ್ ರೆಕ್ಕೆಗಳ ಗಾಳಿಗೆ ತೇಲಿ ಬಂತು ಆನಂದನ ಶವ*
ಕಳೆದ ರವಿವಾರ ದಂದು ಗೆಳೆಯನ ಜೊತೆಯಲ್ಲಿ ಕುಮಟಾ ಸಮುದ್ರ ಬಂಡೆಯ ಮೇಲೆ ನಿಂತಾಗ ಕಾಲು ಜಾರಿ ಮೇಲಿಂದ ಸಮುದ್ರದ ನೀರಿನಲ್ಲಿ ಕೊಚ್ಚಿ ಹೊದ ಕುಮಟಾದ ವನ್ನಳ್ಳಿ ನಿವಾಸಿ ಆನಂದ ನಾರಾಯಣ ಮೋಗೆರ ಶವದ ಹುಡುಕಾಟ ಕಳೆದ ಮೂರು ದಿನಗಳಿಂದ ಜಿಲ್ಲಾಡಳಿತ ಸಹಾಯದಿಂದ ನಡೆಯುತ್ತಿತು ಆದರೆ ಇಂದು ಬೆಳಿಗ್ಗಿನ ಜಾವ 7.45 ದೊರೆತಿದೆ ಮುಂಜಾನೆಯ ಹೊತ್ತಿಗೆ ಜಿಲ್ಲಾಡಳಿತ ಕಾರವಾರದ ಇಂಡಿಯನ್ ನೇವಿ ಇವರ ಸಹಾಯ ಕೇಳಿ ಹೆಲಿಕಾಪ್ಟರ್ ಮೂಲಕ ಕುಮಟಾದ ಸಮುದ್ರದಲ್ಲಿ ಶವದ ಹುಡುಕಾಟ ನಡೆಸುತ್ತಿರುವಾಗ ಹೆಲಿಕಾಪ್ಟರ್ ರೆಕ್ಕೆಯ ಗಾಳಿ ರಭಸಕ್ಕೆ ಆನಂದನ ಶವ ನೀರಿನಿಂದ ಮೇಲೆ ತೇಲಿ ಬಂದಿದೆ ಕಳೆದ ನಾಲ್ಕು ದಿನಗಳಿಂದ ಕುಮಟಾ ಪೋಲಿಸ್ ಸಿಬ್ಬಂದಿಗಳು ಹಾಗೂ ಕರಾವಳಿ ಪೋಲಿಸ್ ಸಿಬ್ಬಂದಿಗಳು ಕುಮಟಾದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರವಾರದ ಇಂಡಿಯನ್ ನೇವಿ ಮತ್ತು ಸ್ಥಳೀಯ ಊರಿನ ನಾಗರಿಕರು ಆನಂದನ ಶವದ ಹುಡುಕಾಡಕ್ಕೆ ಸಹಕರಿಸಿದರು ನಾಲ್ಕನೇ ದಿನದ ಹುಡುಕಾಟದಲ್ಲಿ ಕೊಳೆತ ಶವ ಸಿಕ್ಕಾಗ ಕುಟುಂಬಕ್ಕೆ ಆಘಾತ ಉಂಟಾಯಿತು