ವಿಶ್ವ ವಿಖ್ಯಾತ ಟಾಟಾಸನ್ಸ್ ಸಂಸ್ಥೆಯ ಮುಖ್ಯಸ್ಥರಾದ ರತನ್‍ಟಾಟಾ ಅವರಿಗೆ ವಿಶ್ವದಾದ್ಯಂತ ಉದ್ಯಮ ವಲಯದಲ್ಲಿ ಅಪಾರ ಗೌರವವಿದೆ. 81ರ ಹರೆಯದ ರತನ್‍ಟಾಟಾ ಅವರು ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇವರ ಟ್ರಸ್ಟ್‍ಗಳು ಭಾರತದಾದ್ಯಂತ ವ್ಯಾಪಿಸಿವೆ. ಪದ್ಮಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗೆ ಪಾತ್ರರಾಗಿರುವ ಇವರು ನವಲ್‍ಟಾಟಾ ಅವರ ಮಗ. ಟಾಟಾ ಸಮೂಹ ಸಂಸ್ಥೆಗಳ ಸಂಸ್ಥಾಪಕರಾದ ಜೆಮ್‍ಷೆಡ್‍ಜಿ ಟಾಟಾ ಅವರ ವಂಶಕ್ಕೆ ಸೇರಿದವರು. ವಾಸ್ತುಶಿಲ್ಪ ಪದವೀಧರರಾಗಿರುವ ಇವರು ಆಗರ್ಭ ಶ್ರೀಮಂತರಾಗಿದ್ದರೂ ಕೂಡ ಸರಳ ಜೀವಿ. ಥಳುಕು-ಬಳುಕು-ಆಡಂಬರಗಳಿಂದ ಬಲು ದೂರ.

ರತನ್‍ಟಾಟಾ ಅವರು 1961ರಲ್ಲಿ ಟಾಟಾ ಸಮೂಹ ಸಂಸ್ಥೆಯ ಉದ್ಯೋಗಿಯಾದರು. 1991ರಲ್ಲಿ ಆ ಸಂಸ್ಥೆಯ ಅಧ್ಯಕ್ಷರಾದರು. ತೀವ್ರ ಪೈಪೆÇೀಟಿಯ ನಡುವೆಯೂ ತಮ್ಮ ಸಂಸ್ಥೆಯ ಪಾರಮ್ಯವನ್ನು ಕಾಪಾಡಿಕೊಂಡ ಇವರು 21 ವರ್ಷ ಚೇರ್‍ಮನ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತಮ್ಮ ಸಂಪತ್ತಿನ ಶೇ.65ರಷ್ಟು ಭಾಗವನ್ನು ಶಿಕ್ಷಣ, ವೈದ್ಯಕೀಯ, ಗ್ರಾಮೀಣ ಅಭಿವೃದ್ಧಿ ಮುಂತಾದ ಕ್ಷೇತ್ರಗಳಿಗೆ ವಿನಿಯೋಗಿಸಿದ್ದಾರೆ. ಅನುಭವದ ಮೂಸೆಯಲ್ಲಿ ಪಕ್ವಗೊಂಡಿರುವ ಇವರು ಹಲವು ಕಡೆ ದತ್ತಿ ಉಪನ್ಯಾಸ ನೀಡಿದ್ದಾರೆ. ಇತ್ತೀಚೆಗೆ ಲಂಡನ್‍ನಲ್ಲಿ ನೀಡಿದ ಇವರ ಉಪನ್ಯಾಸದ ಕೆಲವು ಮುಖ್ಯ ಅಂಶಗಳು ಇಲ್ಲಿವೆ.
# ನಿಮ್ಮ ಮಕ್ಕಳಿಗೆ ಶ್ರೀಮಂತರಾಗುವ ರೀತಿಯಲ್ಲಿ ಶಿಕ್ಷಣ ಕೊಡಿಸಬೇಡಿ. ಅವರನ್ನು ಸಂತೋಷವಾಗಿರುವ ಹಾಗೆ ಮಾಡಿ. ಅವರು ಬೆಳೆದ ನಂತರ ವಸ್ತುಗಳ ಬೆಲೆಗಳ ಬದಲು ಅವುಗಳ ಮೌಲ್ಯವನ್ನು ಅರಿಯುವಂತಾಗಲಿ.

# ನಿಮ್ಮ ಆಹಾರವನ್ನು ಔಷಧೀಯ ರೀತಿ ಸೇವಿಸಿ. ಮಿತಿ ಮೀರಿದರೆ ಔಷಧಿಯನ್ನು ಆಹಾರದ ಹಾಗೆ ಸೇವಿಸಬೇಕಾಗುತ್ತದೆ.

# ನಿಮ್ಮನ್ನು ನಿಜವಾಗಿ ಪ್ರೀತಿಸುವವರು ನಿಮ್ಮನ್ನು ಎಂದಿಗೂ ತೊರೆಯುವುದಿಲ್ಲ. ಏಕೆಂದರೆ, ತೊರೆಯುವುದಕ್ಕೆ ನೂರು ಕಾರಣಗಳಿದ್ದರೂ ಅವನು ಅಥವಾ ಅವಳು ನಿನ್ನೊಂದಿಗೆ ಇರಲು ಒಂದು ಕಾರಣ ಸಾಕು.

# ಹ್ಯೂಮನ್ ಬಿಯಿಂಗ್ (ಮನುಷ್ಯ) ಮತ್ತು ಬೀಯಿಂಗ್ ಹ್ಯೂಮನ್ (ಮನುಷ್ಯತ್ವದೊಂದಿಗೆ ಇರುವುದು) ನಡುವೆ ದೊಡ್ಡ ವ್ಯತ್ಯಾಸವಿದೆ. ಇದನ್ನು ಕೆಲವರು ಮಾತ್ರ ಅರ್ಥ ಮಾಡಿಕೊಂಡಿದ್ದಾರೆ.

# ನೀನು ಹುಟ್ಟಿದಾಗ ನಿನ್ನನ್ನು ಪ್ರೀತಿಸುತ್ತಾರೆ. ದೇಹಾಂತ್ಯ ವಾದಾಗಲೂ ನಿನ್ನನ್ನು ಪ್ರೀತಿಸು ವವರಿದ್ದಾರೆ. ಹುಟ್ಟು ಮತ್ತು ಸಾವಿನ ನಡುವಣ ಜೀವನವನ್ನು ನೀನು ರೂಪಿಸಿಕೊಳ್ಳಬೇಕು.

# ವೇಗವಾಗಿ ನಡೆಯಬೇಕಾದಾಗ ಏಕಾಂಗಿಯಾಗಿ ಹೆಜ್ಜೆ ಹಾಕು. ದೂರ ಸಾಗಬೇಕಾದಾಗ ಒಟ್ಟಿಗೆ ಹೆಜ್ಜೆ ಹಾಕು.

# ವಿಶ್ವದ ಆರು ಅತ್ಯುತ್ತಮ ವೈದ್ಯರೆಂದರೆ 1. ಸೂರ್ಯನ ಬೆಳಕು, 2. ವಿಶ್ರಾಂತಿ, 3. ವ್ಯಾಯಾಮ, 4. ಮಿತಾಹಾರ, 5. ಆತ್ಮ ವಿಶ್ವಾಸ, 6. ಗೆಳೆಯರು. ಬದುಕಿನ ಎಲ್ಲ ಹಂತಗಳಲ್ಲೂ ಈ ಆರು ಮಂದಿ ವೈದ್ಯರೊಂದಿಗೆ ಇದ್ದು ಸಂತಸ ಅನುಭವಿಸು.

# ನೀನು ಚಂದ್ರನನ್ನು ಕಂಡಾಗ ದೇವರ ಸೊಬಗನ್ನು ನೋಡುತ್ತೀಯ. ಸೂರ್ಯನನ್ನು ನೋಡಿದಾಗ, ದೇವರ ಶಕ್ತಿಯನ್ನು ಕಾಣುತ್ತೀಯ. ಕನ್ನಡಿ ಮುಂದೆ ನಿಂತಾಗ ದೇವರ ಅತ್ಯುತ್ತಮ ಸೃಷ್ಟಿಯನ್ನು ನೋಡುತ್ತೀಯ. ಆದ್ದರಿಂದ ನಿನ್ನಲ್ಲಿ ನಿನಗೆ ನಂಬಿಕೆ ಇರಲಿ.

# ನಾವೆಲ್ಲರೂ ಪಯಣಿಗರು. ಭಗವಂತನು ನಮ್ಮ ಟ್ರಾವೆಲ್ ಏಜೆಂಟ್. ಅವನು ನಮ್ಮ ಮಾರ್ಗ, ಗುರಿ ಎಲ್ಲವನ್ನೂ ಈಗಾಗಲೇ ಕಾಯ್ದಿರಿಸಿಬಿಟ್ಟಿದ್ದಾನೆ. ಆತನನ್ನು ನಂಬು, ಬದುಕು ಎಂಬ ಪಯಣವನ್ನು ಸಂಭ್ರಮಿಸು. ಧನ್ಯವಾದ ಗೆಳೆಯರೇ, ನಿಮಗೆ ಮುಖ್ಯವಾದವರು ಅನ್ನಿಸಿದವರೊಂದಿಗೆ ಈ ವಿಷಯವನ್ನು ಹಂಚಿಕೊಳ್ಳಿ.