ಕುಮಟಾ – ಗೋಕರ್ಣ ದೇಗುಲ ರಾಮಚಂದ್ರಾಪುರ ಮಠದ ತೆಕ್ಕೆಗೆ : ಸುಪ್ರೀಂ ಕೋರ್ಟ್ ಆದೇಶ

ಗೋಕರ್ಣ ದೇಗುಲ ಮತ್ತೆ ರಾಮಚಂದ್ರಾಪುರ ಮಠದ ತೆಕ್ಕೆಗೆ ಬಂದಿದೆ. ಸೆ.7ರಂದು ಸುಪ್ರೀಂ ಕೋರ್ಟ್ ತೀರ್ಪನ್ನು ಆಧಾರವಾಗಿಟ್ಟುಕೊಂಡು ರಾಜ್ಯ ಸರ್ಕಾರ ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಆದರೆ ಕೋರ್ಟಿನ ತೀರ್ಪನ್ನು ತಿರುಚಿ ದೇವಾಲಯವನ್ನು ಸರ್ಕಾರ ವಶಪಡಿಸಿಕೊಳ್ಳುತ್ತಿದೆ ಎಂದು ಶ್ರೀ ಮಠ, ವಿರೋಧಿಸಿದ್ದಲ್ಲದೆ, ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ಗೆ ಮತ್ತೆ ಅರ್ಜಿ ಸಲ್ಲಿಸಿತ್ತು.
ಈ ಅರ್ಜಿ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್ ದೇವಾಲಯದ ವಿಚಾರವಾಗಿ ಇರುವ ಪ್ರಕರಣದ ಅಂತಿಮ ತೀರ್ಪು ಬರುವವರೆಗೂ ಸರ್ಕಾರದ ವಶಕ್ಕೆ ಪಡೆಯುವುದು ಬೇಡ ಎಂದು ಆದೇಶ ನೀಡಿದೆ. ಅಂತಿಮ ತೀರ್ಪು ಬರುವವರೆಗೂ ದೇವಾಲಯವನ್ನ ಶ್ರೀ ಮಠಕ್ಕೆ ಮರಳಿ ನೀಡಿ ಎಂದು ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ನ್ಯಾ.ಕುರಿಯನ್ ಜೋಸೆಫ್,ನ್ಯಾ. ಖನ್ವಿಲ್ಕರ್ ಇರುವ ದ್ವಿಸದಸ್ಯ ಪೀಠ ಈ ಆದೇಶ ನೀಡಿದೆ. ಈ ಆದೇಶದನ್ವಯ, ಅಂತಿಮ ತೀರ್ಪು ಬರುವ ವರೆಗೂ ಗೋಕರ್ಣ ದೇಗುಲ ಮತ್ತೆ ರಾಮಚಂದ್ರಾಪುರ ಮಠದ ಆಡಳಿತಕ್ಕೆ ಸೇರಲಿದೆ.