ಕನ್ನಡ ಶಾಲೆಯ ಶಿಕ್ಷಕರಾಗಿ ಆಯ್ಕೆಯಾಗುವುದು ಒಂದು ಕಾಲದಲ್ಲಿ ಪೂರ್ವ ಜನ್ಮದ ಪುಣ್ಯ ಎಂದೆ ಪರಿಗಣಿಸಲಾಗುತಿತ್ತು. ಆದರೆ ಇಂದು ಪೂರ್ವ ಜನ್ಮದ ಶಾಪವಾಗಿ ಪರಿಣಮಿಸಿದೆ ಇದಕ್ಕೆಲ್ಲ ಕಾರಣ ಸರಕಾರದ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ನೀತಿಯೆಂದೆ ಹೇಳಲಾಗುತ್ತಿದೆ.ರಾಜ್ಯದಲ್ಲಿನ ಶಿಕ್ಷಕರ ಮತ್ತು ವಿಧ್ಯಾರ್ಥಿಗಳ ಅನುಪಾತಕ್ಕೆ ಅನುಗುಣವಾಗಿ ಶಿಕ್ಷಕರನ್ನ ಹೆಚ್ಚುವರಿ ಮಾಡಿ ಬೇಕಾ ಬಿಟ್ಟಿ ವರ್ಗಾಯಿಸುವ ಈ ಪ್ರಕ್ರಿಯೆ ತುಂಬಾ ಅವೈಜ್ನಾನಿಕವಾಗಿದೆ.ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಎಂದರೆ ಹೆಚ್ಚು ಕಡಿಮೆ ಪನಿಶ್ಮೆಂಟ್ ಟ್ರಾನ್ಸಪರ್ ಎಂದರೆ ತಪ್ಪಾಗಲಿಕಿಲ್ಲ ಅಂದರೆಇಂದರಿಂದ ಐದನೇ ತರಗತಿವರೆಗೆ ಮಕ್ಕಳ ಸಂಖ್ಯೆ ೧೦ರ ಒಳಗೆ ಇದ್ದರೆ ಒಬ್ಬ ಶಿಕ್ಷಕ ಅನಂತರ ಮಕ್ಕಳ ಸಂಖ್ಯೆ ೧೧-೬೦ರವರೆಗೆ ಇನ್ನೋರ್ವ ಶಿಕ್ಷಕ ಅಂದರೆ ೧ರಿಂದ ೫ನೇ ತರಗತಿ ವರೆಗೆ ೬೦ಮಕ್ಕಳವರೆಗೂ ಇಬ್ಬರು ಶಿಕ್ಷಕರು.೬೧ ಇದ್ದರೆ ಇನ್ನೋರ್ವ ಶಿಕ್ಷಕ ೬ಮತ್ತು ೭ ನೇ ತರಗತಿ ಸೇರಿ ಮಕ್ಕಳ ಸಂಖ್ಯೆ ೧೦ರೊಳಗಿದ್ದರೆ ಒಬ್ಬ ಶಿಕ್ಷಕ.೧೧-೭೦ರವರೆಗೆ ಇನ್ನೋರ್ವ ಶಿಕ್ಷಕ.ಅಂದರೆ ೬ಮತ್ತು ೭ನೇ ತರಗತಿಯಲ್ಲಿ ಮಕ್ಕಳ ಸಂಖ್ಯೆ ೭೦ರವರೆಗೂ ಇಬ್ಬರು ಶಿಕ್ಷಕರು.ಇದರಿಂದಾಗಿ ೧-೭ನೇ ತರಗತಿವರೆಗೆ ೧೩೦ಮಕ್ಕಳಿಗೆ ೪ ಶಿಕ್ಷಕರನ್ನ ನೀಡುವ ವ್ಯವಸ್ಥೆ ಇದೆ. ಇದು ಹಿರಿಯ ಪ್ರಾಥಮಿಕ ಶಾಲೆಗಳಿಗಿರುವ ವ್ಯವಸ್ಥೆ.ಆದರೆಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಷ್ಟು ಮಕ್ಕಳಿದ್ದರೂ ಅಂದರೆ ೧೦ರೊಳಗಿದ್ದರೂ ಇಬ್ಬರು ಶಿಕ್ಷಕರು.ಒಂದು ಶಾಲೆಯಲ್ಲಿ ೧-೫ರವರೆಗೆ ೧೧ ವಿಧ್ಯಾರ್ಥಿಗಳು ೬ಮತ್ತು ೭ ಸೇರಿ ೧೧ ವಿಧ್ಯಾರ್ಥಿಗಳಿದ್ದರೆ ಒಟ್ಟು ೪ ಶಿಕ್ಷಕರು ಲಭ್ಯವಾಗುತ್ತಾರೆ.ಅಂದರೆ ೨೨ ವಿಧ್ಯಾರ್ಥಿಗಳಿರುವ ಶಾಲೆಗೂ ನಾಲ್ಕು ಶಿಕ್ಷಕರು ೧೩೦ ವಿಧ್ಯಾರ್ಥಿಗಳಿರುವ ಶಾಲೆಗೂ ೪ ಶಿಕ್ಷಕರು. ಇದು ಎಲ್ಲಿಯ ನ್ಯಾಯ ಇಷ್ಟು ಅಲ್ಲದೇ ಹಿಂದಿನ ಶೈಕ್ಷಣಿಕ ವರ್ಷದ ಮಕ್ಕಳ ಅಂಕಿ ಸಂಖ್ಯೆಗಳನ್ನ ಆಧಾರವಾಗಿಟ್ಟುಕೊಂಡು ಹಿಂದಿನಬಾರಿ ಶಿಕ್ಷಕರನ್ನ ಹೆಚ್ಚುವರಿ ಮಾಡಿದ್ದಾರೆ.ಜೂನ್ ನಲ್ಲಿ ವರ್ಗಾವಣೆ ನಡೆದರೆ ಸದ್ರಿ ವರ್ಷದ ಅಂಕಿ ಸಂಖ್ಯೆಗಳು ಸಿಗುವುದಿಲ್ಲವೆಂದರೆ ಸರಿ.ಆದರೆ ವರ್ಗಾವಣೆ ನಡೆದಿರುವುದು ಅಗಸ್ಟನಲ್ಲಿ ಆಗಲೂ ಹಿಂದಿನ ವರ್ಷದ ಅಂಕಿ ಸಂಖ್ಯೆಯನ್ನ ಆಧಾರವಾಗಿಟ್ಟುಕೊಂಡು ವರ್ಗಾವಣೆ ನಡೆದಿದೆ. ಸದ್ರಿ ವರ್ಷದ ಅಂಕಿ ಸಂಖ್ಯೆಯ ಪ್ರಕಾರ ಆ ಶಾಲೆಯಲ್ಲಿ ಆ ಶಿಕ್ಷಕ ಹೆಚ್ಚುವರಿ ಆಗಿರುವುದಿಲ್ಲ. ಅದು ಅಲ್ಲದೇ ಯಾವ ಶಾಲೆಯಲ್ಲಿ ಖಾಲಿ ಹುದ್ದೆ ತೋರಿಸುತ್ತಾರೋ ಆ ಶಾಲೆಯಲ್ಲಿ ಶಿಕ್ಷಕರ ಅವಶ್ಯಕತೆಯೇ ಇಲ್ಲ.ಹೀಗಿರುವಾಗ ಅಲ್ಲಿ ಹೊಸ ಶಿಕ್ಷಕನನ್ನ ತುಂಬಿದ ದಿನದಿಂದಲೇ ಅಲ್ಲಿರುವ ಇನ್ನೋರ್ವ ಶಿಕ್ಷಕ ಹೆಚ್ಚುವರಿ ಆಗುತ್ತಾನೆ.ಇದು ಪನಿಶ್ಮೆಂಟ್ ಟ್ರಾನ್ಸಫರ್ ಅಲ್ಲದೇ ಮತ್ತೇನಾಗಲು ಸಾಧ್ಯ. ಇದು ಇಂದಿನ ಶಿಕ್ಷಕರಿಗೆ ಬಂದಿರುವ ದುಸ್ಥಿತಿ.ಇದಕ್ಕೆ ಪರಿಹಾರವೇ ಇಲ್ಲವೆಂದಿಲ್ಲ. ಪ್ರತಿ ಕಿ.ಮೀ ಗೆ ಒಂದೊಂದರಂತೆ ತಲೆ ಎತ್ತುತ್ತಿರುವ ಖಾಸಗಿ ಶಾಲೆಯ ಹಾವಳಿಯಿಂದಾಗಿ ಸರಕಾರಿ ಶಾಲೆಗಳಲ್ಲಿ ವಿಧ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಈ ಸಂಧರ್ಭದಲ್ಲಿ ೩೦ ಮಕ್ಕಳಿಗೆ ಒಬ್ಬ ಶಿಕ್ಷಕ ಎಂಬ ಆರ್.ಟಿ.ಇ ಕಾಯಿದೆಯಿಂದಾಗಿ ಎಷ್ಟು ಶಿಕ್ಷಕರನ್ನು ವೃತ್ತಿಯಲ್ಲಿ ಉಳಿಸಿಕೊಳ್ಳಲು ಸಾಧ್ಯ ಎನ್ನುವುದಕ್ಕಿಂತ ೧ರಿಂದ ೫ನೇ ತರಗತಿವರೆಗೆ ೨೫ ಮಕ್ಕಳಿಗೆ ಒಬ್ಬ ಶಿಕ್ಷಕ ಎಂಬ ನಿಯಮ ಬಂದರೆ ಸ್ವಲ್ಪ ಮಟ್ಟಿಗಾದರೂ ಮಕ್ಕಳಿಗೆ ಗುಣ ಮಟ್ಟದ ಶಿಕ್ಷಣ ಕೊಡಲು ಸಾಧ್ಯವಾಗುತ್ತದೆ.ಎಲ್ಲಾ ಪಾಲಕರಿಗೂ ಖಾಸಗಿ ಶಾಲೆಗೆ ತಮ್ಮ ಮಕ್ಕಳನ್ನ ಕಳುಹಿಸುವ ಆರ್ಥಿಕ ಪರಿಸ್ಥಿತಿ ಇಲ್ಲ. ಆದರೆ ಅವರೂ ಪ್ರತಿಭಾವಂತರೆ ಅಂತವರನ್ನ ನಮ್ಮ ಧೇಶದ ಬೆನ್ನೆಲುಬಾಗಿ ತಯಾರಿಸ ಬೇಕಾದರೆ ಶಿಕ್ಷಕರ ಕೊರತೆಯಿಂದ ಸಾಧ್ಯವಾಗದು. ಒಂದರಿಂದ ೫ನೇ ತರಗತಿ ವರೆಗೆ ೬೦ರ ಬದಲಾಗಿ ೫೦ ಮಕ್ಕಳಿಗೆ ಇಬ್ಬರು ಶಿಕ್ಷಕರನ್ನು ಕೊಡುವ ನಿಯಮ ಜಾರಿಗೆ ಬಂದರೆ ಎಲ್ಲಾ ಸರಕಾರಿ ಶಾಲೆಗಳ ಸ್ಥಿತಿ ಉತ್ತಮಗೊಳ್ಳುವುದರಲ್ಲಿ ಸಂದೇಹವಿಲ್ಲ ಎನ್ನುವುದು ಪ್ರಜ್ಞಾವಂತರ ಮಾತಾಗಿದೆ.