ಪ್ರೇಕ್ಷಕರನ್ನು ರಂಜಿಸಿದ ಕೃಷ್ಣಾರ್ಜುನ ಯಕ್ಷ ಪ್ರದರ್ಶನ

ಯಲ್ಲಾಪುರ: ಯಕ್ಷಕಲಾ ಬಳಗ ಯಲ್ಲಾಪುರ ಇವರ ಆಶ್ರಯದಲ್ಲಿ ನವರಾತ್ರಿಯ ಪ್ರಯುಕ್ತ ಪಟ್ಟಣದ ಎಪಿಎಂಸಿ ರೈತಭವನದಲ್ಲಿ ಪ್ರಸಿದ್ಧ ಕಲಾವಿದರಿಂದ ಪ್ರದರ್ಶನಗೊಂಡ ಕೃಷ್ಣಾರ್ಜುನ ಯಕ್ಷಗಾನ ಪ್ರೇಕ್ಷಕರನ್ನು ರಂಜಿಸಿತು.
ಹಿಮ್ಮೇಳದಲ್ಲಿ ಭಾಗವತರಾಗಿ ರಾಘವೇಂದ್ರ ಆಚಾರಿ ಜನ್ಸಾಲೆ, ಮದ್ದಲೆವಾದಕರಾಗಿ ಸುನಿಲ್ ಭಂಡಾರಿ ಕಡತೋಕ, ಚಂಡೆವಾದಕರಾಗಿ ಗಣೇಶ ಗಾಂವ್ಕಾರ ಕನಕನಹಳ್ಳಿ ಕಾರ್ಯ ನಿರ್ವಹಿದರು. ಅರ್ಜುನನಾಗಿ ಸುಬ್ರಹ್ಮಣ್ಯ ಚಿಟ್ಟಾಣಿ, ಸುಭದ್ರೆಯಾಗಿ ಸುಬ್ರಹ್ಮಣ್ಯ ಯಲಗುಪ್ಪ, ಕೃಷ್ಣನಾಗಿ ಉದಯ ಹೆಗಡೆ ಕಡಬಾಳ, ದಾರುಕನಾಗಿ ಶ್ರೀಧರ ಹೆಗಡೆ ಚಪ್ಪರಮನೆ, ಭೀಮನಾಗಿ ಭಾಸ್ಕರ ಗಾಂವ್ಕಾರ ಬಿದ್ರೆಮನೆ, ರುಕ್ಮಿಣಿಯಾಗಿ ನಾಗರಾಜ ಭಟ್ಟ ಕುಂಕಿಪಾಲ, ಅಭಿಮನ್ಯುವಾಗಿ ವರುಣ ಹೆಗಡೆ ತೂಕದಬೈಲ್ ಪಾತ್ರನಿರ್ವಹಿಸಿದರು.