ಸ್ವರ್ಣವಲ್ಲೀಯಲ್ಲಿ ಶರನ್ನವರಾತ್ರಿ ಸಾಂಸ್ಕೃತಿಕ ಸಡಗರ

ಶಿರಸಿ: ಸೋಂದಾ ಸ್ವರ್ಣವಲ್ಲಿಯಲ್ಲಿ ಶರನ್ನವರಾತ್ರಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರತಿದಿನ ನಡೆಸಿಕೊಂಡು ಬರುತ್ತಿದೆ. ಅ.13 ಇಂದು ಮೊದಲು ಸ್ವರ್ಣವಲ್ಲೀಯ ಕೇಂದ್ರ ಮಾತೃಮಂಡಲದ ಮಾತೆಯರು ಭಜನೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಇವರಿಗೆ ಕುಮಾರಿ ಗೀತಾ ಹಾರ್ಮೋನಿಯಂನಲ್ಲಿ ಹಾಗೂ ಕುಮಾರ ಪ್ರಜ್ಷಲ್ ಜೋಷಿ ತಬಲಾ ಸಾಥ್ ನೀಡಿದರು. ನಂತರದಲ್ಲಿ ಹುಲದೇವಸರದ ರಾಜೇಶ ಶಾಸ್ತ್ರಿಯವರ ಸಂಗೀತಕ್ಕೆ ಎಲೆಸರದ ಸತೀಶ ಹೆಗಡೆ ಅವರು ಅತ್ಯಂತ ಆಕರ್ಷಕವಾಗಿ ಚಿತ್ರಬಿಡಿಸುವ ಮೂಲಕ ಕುಂಚಕಲಾ ಸೇವೆ ನಡೆಸಿಕೊಟ್ಟರು. ಇವರಿಗೆ ಭಟ್ರಕೇರಿಯ ಕುಮಾರ ಪ್ರದೀಪ ಅನಂತ ಹೆಗಡೆ ಹಾರ್ಮೋನಿಯಂನಲ್ಲಿ ಹಾಗೂ ಕುಮಾರ ವಿವೇಕ ಶ್ರೀಪಾದ ಹೆಗಡೆ ತಬಲಾ ಸಾಥ ನೀಡಿದರು. ನಾಳಿಸರದ ನಾಗೇಂದ್ರ ಹೆಗಡೆ ಅವರು ಅತ್ಯಂತ ವಿರಳವಾದ ಹಿಂದಿನ ಕಾಲದ ಹಾರ್ಮೋನಿಯಂ ನುಡಿಸಿದರು. ನಂತರದಲ್ಲಿ ಶಿವರಾಮ ಭಾಗ್ವತ್ ಕನಕನಳ್ಳಿ ಅವರು “ಮೆಲೋಡಿಕ” ಎನ್ನುವ ವಿನೂತನವಾದ ವಾದನ ಸೇವೆಯನ್ನು ಅದ್ಭುತವಾಗಿ ನಡೆಸಿಕೊಟ್ಟರು. ಇವರಿಗೆ ರಾಜೇಂದ್ರ ಭಾಗ್ವತ್ ಹೆಗ್ಗಾರ್ ತಬಲಾದಲ್ಲಿ ಸಹಕಾರ ನೀಡಿದರು. ಸಾಂಸ್ಕೃತಿಕ ಸಮಿತಿ ಸದಸ್ಯರು ಸಂಘಟಿಸಲು ನೆರವಾದರು. ಸಾಂಸ್ಕೃತಿಕ ಸಮಿತಿ ಅಧ್ಯಕ್ಷರಾದ ಆರ್.ಎನ್.ಭಟ್ಟ ಸುಗಾವಿ ನಿರ್ವಹಿಸಿದರು.
ಅ.14 ಮತ್ತು 15 ರಂದು: ಬೆಳಗ್ಗೆ ಶ್ರೀ ಶಾರದಾ ಸ್ಥಾಪನೆ ನಡೆಯಲಿದೆ. ಹಾಗೆ ಆದರ್ಶ ವನಿತಾ ಸಮಾಜದಿಂದ ಭಜನೆ ಕಾರ್ಯಕ್ರಮ ನಂತರ ಬೆಂಗಳೂರಿನ ವಿದೂಷಿ ಸಮುದ್ಯತಾ ಮತ್ತು ವಿದುಷಿ ಸಮನ್ವಿತಾ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಲಿದೆ. 15 ರಂದು ಸಂಧ್ಯಾ ಸತ್ಯನಾರಾಯಣ ಭಟ್ಟ ಇವರಿಂದ ಹಿಂದೂಸ್ತಾನಿ ಸಂಗೀತ ಹಾಗೂ ಕುಮಾರ ನಿಖಿಲ್ ಸುರೇಶ ಹೆಗಡೆ ಇವರಿಂದ ಭರತನಾಟ್ಯ ನಡೆಯಲಿದೆ.