ಆಗದ ಹೈಟೇಕ್ ಬಸ್ ನಿಲ್ದಾಣ : ಭ್ರಮನಿರಸಗೊಂಡ ಮುಂಡಗೋಡ ಜನತೆ
ಮುಂಡಗೋಡ : ಹೈಟೆಕ್ ಬಸ್ ನಿಲ್ಧಾಣ ಕಾಣುತ್ತೇವೆ ಎಂದುಕೊಂಡ ಮುಂಡಗೋಡ ಜನರಿಗೆ ನಿರಾಶೆಯುಂಟುಮಾಡಿದೆ ಶಂಕು ಸ್ಥಾಪನೆಯಾಗಿ ಏಳು ತಿಂಗಳು ಗತಿಸಿದರೂ ಇನ್ನೂ ತನಕ ಕಾಮಗಾರಿಯ ಕುರುಹು ಸಹಿತ ಕಾಣದೇ ಇರುವುದರಿಂದ ಹೈಟೆಕ್ ಬಸ್ ಸ್ಟ್ಯಾಂಡ ನಮ್ಮೂರಿಗೆ ಕನಸಿನಮಾತು ಎಂದು ಸಾರ್ವಜನಿಕರು ಮಾತನಾಡುತ್ತಿರುವುದು ಕೇಳಿಬರುತ್ತಿದೆ
ಸುಮಾರು ಅರ್ಧಶತಮಾನ ಕಂಡ ಮುಂಡಗೋಡ ಬಸ್ ನಿಲ್ದಾಣ ಕಟ್ಟಡವು ತುಂಬಾ ಹಳೆಯದಾಗಿದ್ದು ಹಾಗೂ ಮಳೆಗಾಲದಲ್ಲಿ ಪ್ರಯಾಣಿಕರು ಬಸ್‍ಗಾಗಿ ಕಾದುಕುಳಿತುಕೊಳ್ಳವ ಸ್ಥಳ ಸೋರುತ್ತಿದೆ ಅಲ್ಲದೆ ಕಟ್ಟಡದ ಗೋಡೆಗಳಲ್ಲಿಯೂ ಬಿರುಕುಗಳು ಕಾಣಿಸುತ್ತವೆ. ಮೂಲಭೂತಸೌಕರ್ಯಗಳಿಂದ ತೊಳಲಾಡುತ್ತಿದ್ದ ಬಸ್ ನಿಲ್ದಾಣವನ್ನು ನೂತನ ಬಸ್ ನಿಲ್ದಾಣವನ್ನು ಮಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಾ ಬಂದಿದ್ದರು. ಸಾರ್ವಜನಿಕರ ಆಸೆ ಈಡೆರಿಸಲು ಸಜ್ಜಾಗಿ ಬಸ್‍ಸ್ಟ್ಯಾಂಡ ಸರ್ಜರಿಮಾಡಲು ಶಾಸಕ ಶಿವರಾಮ ಹೆಬ್ಬಾರ ಸಿದ್ದರಾಗಿ ನೂತನ ಹೈಟೇಕ್ ಬಸ್‍ಸ್ಟ್ಯಾಂಡ 3ಕೋಟಿ 98 ಲಕ್ಷ ರೂ ವೆಚ್ಚದ ಮಂಜೂರಿ ಮಾಡಿಸಿಕೊಂಡು ಬಂದು ಅಂದಿನ ಸಾರಿಗೆ ಸಚಿವ ರೇವಣ್ಣ ಮಂಡಗೋಡ ದ ಬಸ್ ನಿಲ್ದಾಣದ ಆವರಣದಲ್ಲಿ ಅದ್ದೂರಿಯಾಗಿ 20-3-2018 ರಂದು ಶಂಕು ಸ್ಥಾಪನೆ ಕಾರ್ಯಕ್ರಮ ನಡೆಸಿ ಶೀಘ್ರದಲ್ಲಿ ಹೈಟೆಕ್ ಬಸ್‍ಸ್ಟ್ಯಾಂಡ ವಾಗುತ್ತಿದೆ ಜನರ ಸೇವೆಯೇ ನಮ್ಮ ಮೊದಲ ಆದ್ಯತೆ ಎಂದಿದ್ದರು. ಆದರೆ ಸಚಿವರು ಹೇಳಿದ ಹಾಗೆ ಶೀಘ್ರದಲ್ಲಿ ಬಸ್‍ಸ್ಟ್ಯಾಂಡ ಆಗಲೇ ಇಲ್ಲಾ ಇದರಿಂದ ಜನರು ಜನಪ್ರತಿನಿಧಿಗಳ ಮೇಲೆ ಭ್ರಮನಿರಸಗೊಂಡಿದ್ದಾರೆ
ಹೈಟೇಕ್ ಬಸ್ ನಿಲ್ದಾಣ : 20-3-2018 ರಂದು ಬಸ್ ನಿಲ್ದಾಣದ ಶಂಕು ಸ್ಥಾಪನೆಯಾಯಿತು ಒಂದು ಎಕರೆ 6 ಗುಂಟೆ ಜಾಗದಲ್ಲಿ ಸುಂದರ, ಸುಸಜ್ಜಿತ, 3ಕೋಟಿ 90 ಲಕ್ಷ ರು ವೆಚ್ಚದಲ್ಲಿ ವಿಶೇಷ ಸೌಲಭ್ಯಗಳೊಂದಿಗೆ ಬಸ್ ನಿಲ್ದಾಣ ನಿರ್ಮಾಣವಾಗಲಿದೆ. ಶುದ್ಧ ಕುಡಿಯುವ ನೀರು, ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ, ಚಿಕ್ಕ ಮಕ್ಕಳಿರುವ ತಾಯಿಂದರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿ ಹೈಟೆಕ್ ಶೌಚಾಲಯ ಹೀಗೆ ಎಲ್ಲ ಬಗೆಯ ಸೌಲಭ್ಯಗಳೊಂದಿಗೆ ಹೈಟೆಕ್ ಬಸ್ ನಿಲ್ದಾಣ ವಾಗಲಿದೆ
ಶೀಘ್ರದಲ್ಲಿ ಹೈಟೆಕ್ ಬಸ್‍ಸ್ಟ್ಯಾಂಡ ಕಾಮಗಾರಿ ಪ್ರಾರಂಭವಾಗಲಿ ಈ ಕುರಿತು ಶಾಸಕರು ಹಾಗೂ ಜನ ಪ್ರತಿನಿಧಿಗಳು ಇಲಾಖಾ ಅಧಿಕಾರಿಗಳ ಮೇಲೆ ಹಾಗೂ ಗುತ್ತಿಗೆದಾರರಮೇಲೆ ಒತ್ತಡ ತರಲಿ ಎಂದು ಸಾರ್ವಜನಿಕರ ಆಶಯವಾಗಿದೆ