ವೃಕ್ಷ ಲಕ್ಷ ನಿಯೋಗದಿಂದ ಶಿರಸಿ- ಕುಮಟಾ ರಸ್ತೆ ಅಗಲೀಕರಣ ಪುನರ್ ಪರಿಶೀಲನೆ ಕುರಿತು ಮುಖ್ಯಮಂತ್ರಿಗೆ ಮನವಿ

ಶಿರಸಿ: ಪಶ್ಚಿಮ ಘಟ್ಟದ ಅತಿ ಸೂಕ್ಷ್ಮ ಪರಿಸರ ಪ್ರದೇಶವಾದ ದೇವಿಮನೆ- ಬಂಡಲ್ ಘಟ್ಟ, ಅಘನಾಶಿನಿ ನದಿ ಕಣಿವೆ ಪ್ರದೇಶ ಪರ್ವತಗಳನ್ನು ಕಡಿದು ಶಿರಸಿ- ಕುಮಟಾ ರಸ್ತೆ ಅಗಲೀಕರಣ ಯೋಜನೆ ಜಾರಿ ಮಾಡುವುದರಿಂದ ಭಾರೀ ಭೂಕುಸಿತ, ಪರಿಸರ ಅವಘಡಗಳಿಗೆ ಕಾರಣವಾಗಲಿದೆ ಎಂದು ವೃಕ್ಷ ಲಕ್ಷ ನಿಯೋಗ ಅ.22 ರಂದು ಶಾಸಕ ವಿಶ್ವೇಶ್ವರ ಹೆಗಡೆ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮನವಿಯು ಹಾಳಾಗಿರುವ ಶಿರಸಿ-ಕುಮಟಾ ರಸ್ತೆ ಪುನರ್ ನಿರ್ಮಾಣ ಯೋಜನೆ ಜಾರಿ ಮಾಡಬೇಕು ಮತ್ತು ರಸ್ತೆ ಅಗಲೀಕರಣ ಯೋಜನೆಯ ಬಗ್ಗೆ ಪುನರ್ ಪರಿಶೀಲನೆ ಮಾಡಬೇಕು ಎಂಬ ಅಂಶಗಳನ್ನ ಒಳಗೊಂಡಿದೆ. ನಿಯೋಗದಲ್ಲಿ ಅನಂತ ಹೆಗಡೆ ಅಶೀಸರ, ವಾಸಂತಿ ಹೆಗಡೆ, ಡಾ. ಕೇಶವ ಕೊರ್ಸೆ, ಮಧುಮತಿ, ವಿ.ಪಿ.ಹೆಗಡೆ, ಬಿ.ಜಿ.ಹೆಗಡೆ ಗೇರಾಳ, ಗಣೇಶ ಯಡಳ್ಳಿ, ವಿಶ್ವನಾಥ ಬುಗಡಿಮನೆ, ರಮೇಶ ಕಾನಗೋಡ, ಈಶಣ್ಣ ನೀರ್ನಳ್ಳಿ, ನರಸಿಂಹ ವಾನಳ್ಳಿ, ರತ್ನಾಕರ ಬಾಡಲಕೊಪ್ಪ, ಶ್ರೀಪಾದ, ಗಣಪತಿ ಕೆ, ರಾಘವ, ಶ್ರೀಪಾದ ದೊಡ್ನಳ್ಳಿ ಮುಂತಾದವರಿದ್ದರು.