ಅತಿಯಾದ ಮಾದಕ ಸೇವನೆಯಿಂದ ರಸ್ತೆಗೆ ಬಿದ್ದ ವಿದೇಶಿ ಪ್ರವಾಸಿಗ

ಗೋಕರ್ಣ: ವಿದೇಶಿ ಪ್ರವಾಸಿಯೊಬ್ಬ ರಸ್ತೆಯಲ್ಲಿ ಬಿದ್ದು ತುರಾಡುತ್ತಿದ್ದ ಘಟನೆ ಸೋಮವಾರ ಇಲ್ಲಿನ ಹೋಟೇಲ್ ಇಂಟರನ್ಯಾಶನಲ್ ಬಳಿ ನಡೆದಿದೆ. ತಕ್ಷಣ ಪೊಲೀಸರು ಮತ್ತು ಸ್ಥಳೀಯರು ಸೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಂದಿದ್ದು, ಇಲ್ಲಿನ ವೈದ್ಯಾಧಿಕಾರಿಗಳು ಹೆಚ್ಚಿನ ಚಿಕಿತ್ಸೆಗೆ ಕಾರವಾರಕ್ಕೆ ಹೋಗಲು ಸೂಚಿಸಿದ್ದಾರೆ. ವೈದ್ಯರು ಹೇಳುವ ಪ್ರಕಾರ ಅತಿಯಾದ ಗಾಂಜಾ ಅಥವಾ ಇನ್ನಿತರ ಮಾದಕ ಪದಾರ್ಥ ಸೇವಿಸಿದ್ದರಿಂದ ಅರೆಪ್ರಜ್ಞಾ ಸ್ಥಿತಿ ತಲುಪಿದ್ದಾನೆ.ಆದರೆ ಈತನ ಹೆಸರು ಯಾವ ದೇಶದವನು ಎಂಬ ಇತರ ಮಾಹಿತಿ ಲಭ್ಯವಾಗಿಲ್ಲ.
ವೈದ್ಯರಿಗೆ ಎಗರಿದ ಪ್ರವಾಸಿ: ಚಿಕಿತ್ಸೆ ಕೊಡಲು ಮುಂದಾದಾಗ ಏಕಾಏಕಿ ವೈದ್ಯರ ಕೈ ಕಚ್ಚಲು ಬಂದಿದ್ದು, ನರ್ಸಗಳ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ನಶೆಯಲ್ಲಿದ್ದವನ್ನು ಅಂತೂ ಇಂತೂ ಹಿಡಿದು ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಪುರಾಣ ಪ್ರಸಿದ್ದ ಕ್ಷೇತ್ರ ಮೋಜುಮಸ್ತಿ ತಾಣವಾಗುತ್ತಿದೆ. ಅಲ್ಲದೆ ಈ ತಿಂಗಳಿಂದ ವಿದೇಶಿಗರು ಆಗಮಿಸುತ್ತಿದ್ದು, ಪ್ರತಿ ವರ್ಷ ವಿದೇಶಿಗರಿಂದ ನಶೆಯಲ್ಲಿ ಇದೆ ರೀತಿ ಅನೇಕ ಘಟನೆಗಳು ನಡೆದಿದ್ದವು. ಇನ್ನಾದರೂ ಪೊಲೀಸ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ.