ಕುಮಟಾ ದೇವಗಿರಿ ಹರನೀರಿನಲ್ಲಿರುವ ರಿಲಾಯ್ಬಲ್ ಕಾಶ್ಯೂ ಫ್ಯಾಕ್ಟರಿಯಲ್ಲಿ ಸುಮಾರು 600ಕ್ಕೂ ಅಧಿಕ ಕಾರ್ಮಿಕರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಭೇಟಿನೀಡಲಾಯಿತು. ತಾವು ಕಳೆದ ಆರು ವರ್ಷಗಳಿಂದ ಫ್ಯಾಕ್ಟರಿಯಲ್ಲಿ ದುಡಿಯುತ್ತಿದ್ದು, ಈ ಮೊದಲು ನೀಡುತ್ತಿದ್ದ ಸಂಬಳವನ್ನು ಏಕಾಏಕಿ ಕಡಿಮೆಮಾಡಿದ್ದರಿಂದ ಕಂಗಾಲಾದ ತಾವು ಪ್ರತಿಭಟನೆ ನಡೆಸುತ್ತಿರುವುದಾಗಿ ಕಾರ್ಮಿಕರು ಹೇಳಿಕೊಂಡಾಗ, ವ್ಯವಸ್ಥಾಪಕ ಮಂಡಳಿಯವರ ಜತೆ ಮಾತನಾಡಿ ಕಾರ್ಮಿಕರ ಸಮಸ್ಯೆ ಕುಂದುಕೊರತೆಗಳನ್ನು ಕೂಡಲೇ ಪರಿಹರಸುವಂತೆ ಆಗ್ರಹಿಸಲಾಯಿತು ಮತ್ತು ಸಮಸ್ಯೆಗೆ ವ್ಯವಸ್ಥಾಪಕ ಸ್ಪಂದಿಸದಿದ್ದಲ್ಲಿ ಕಾರ್ಮಿಕರಿಗೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಲಾಯಿತು… ಈ ಸಂದರ್ಭದಲ್ಲಿ ವಿ.ಎಲ್.ನಾಯ್ಕ, ಹನುಮಂತ ಪಟಗಾರ, ಸಚಿನ್ ನಾಯ್ಕ, ಪಾಂಡು ಪಟಗಾರ , ಗೋವಿಂದ ಪಟಗಾರ ಮುಂತಾದವರು ಹಾಜರಿದ್ದರು…