*ಕುಮಟಾ ವೈಭವ ಸಮಿತಿ* ಕುಮಟಾ ಪಟ್ಟಣದ ಪೂರ್ಣಿಮಾ ರೈಲ್ ಹೋಟೆಲ್ಲನಲ್ಲಿ ನವೆಂಬರ 21 ರಿಂದ 25 ರ ವರೆಗೆ ಕುಮಟಾ ಮಣಕಿ ಮೈದಾನದಲ್ಲಿ ಕಲರ್ಸ ಸೂಪರ್ ಕನ್ನಡಾ ಮತ್ತು ದೂರದರ್ಶನ ಚಂದನ ವಾಹಿನಿಯ ಸಹಕಾರದೋಂದಿಗೆ ತಾಂಡವ ಕಲಾನಿಕೇತನ ಮತ್ತು ಕುಮಟಾ ವೈಭವ ಸಮೀತಿಯ ಆಶ್ರಯದಲ್ಲಿ ನಡೆಯಲಿರುವ ” ಕುಮಟಾ ವೈಭವ “ಸಾಂಸ್ಕೃತಿಕ ಉತ್ಸವದ ಪೂರ್ವ ತಯಾರಿಯ ಕುರಿತು ಮಾಧ್ಯಮ ಘೋಷ್ಟಿ ಕರೆಯಲಾಗಿತ್ತು

ಈ ಸಂದರ್ಭದಲ್ಲಿ ವೈಭವ ಸಮೀತಿಯ ಆಧ್ಯಕ್ಷರಾದ ಶಿವಾನಂದ ಹೆಗಡೆ ಸರ್ವಾಧ್ಯಕ್ಷರಾದ ಎಂ ಜಿ ಭಟ್ಟ ಮತ್ತು ತಾಂಡವ ಕಲಾನಿಕೆತನದ ಸಂಸ್ಥಾಪಕ ಅಧ್ಯಕ್ಷರಾದ ಮಂಜುನಾಥ ನಾಯ್ಕ ಅವರು
5 ದಿನಗಳಕಾಲ ನಡೆಲಿರುವ ಸಾಂಸ್ಕೃತಿಕ ಉತ್ಸವದ ವಿವರಣೆ ನೀಡಿದರು ಅಲ್ಲದೆ ನವೆಂಬರ 4 ರಂದು ಕುಮಟಾ ಪಟ್ಟಣದ ನಾದಶ್ರೀ ಕಲಾ ಕೇಂದ್ರದಲ್ಲಿ ದೂರದರ್ಶನ ಚಂದನ ವಾಹಿನಿಯ ಮದುರ ಮದುರ ಈ ಮಂಜುಳಗಾನದ ಕಲಾವಿದರ ಆಯ್ಕೆ ಪ್ರಕ್ರಿಯೆಯನ್ನ ಹಮ್ಮಿಕೊಳ್ಳಲಾಗಿದ್ದು ಈ ಬಾರಿ ಹಾಡುಗಾರರು ಮತ್ತು ನೃತ್ಯ ಮಾಡುವವರು ತಂದೆ – ತಾಯಿಗೆ ಅರ್ಪಿಸುವ ಹಾಡುಗಳನ್ನ ಮತ್ತು ನೃತ್ಯವನ್ನ ಅಳವಡಿಸಿಕೊಳ್ಳಬೇಕು ಎಂದರು ಅಲ್ಲದೇ ನೃತ್ಯಕ್ಕೆ ಕನಿಷ್ಟ 8 ಮತ್ತು ಗರಿಷ್ಟ 10 ಜನರಿರಬೇಕು ಎಂದರು ಭಾಗವಹಿಸುವ ಕಲಾವಿದರು 9481148168 ಮತ್ತು 9480667586 ನಂ ಗೆ ಸಂಪರ್ಕಿಸುವಂತೆ ಮನವಿ ಮಾಡಿಕೊಂಡರು
ಮಧ್ಯಮ ಘೋಷ್ಟಿಯಲ್ಲಿ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ. ಸರ್ವಾಧ್ಯಕ್ಷ ಎಂ ಜಿ ಭಟ್ಟ ತಾಂಡವ ಕಲಾನಿಕೇತನದ ಸಂಸ್ಥಾಪಕ ಅಧ್ಯಕ್ಷ ಮಂಜುನಾಥ ನಾಯ್ಕ ಸದಸ್ಯರಾದ ಅಶ್ವಿನ ನಾಯ್ಕ ನರಸಿಂಹ ಭಟ್ಟ ಕಡತೋಕಾ ಹೇಮಂತ ಕುಮಾರ ಮಹೇಶ ನಾಯ್ಕ ಅರುಣ ನಾಯಕ ಗಣೇಶ ನಾಯ್ಕ ಮೀರಾ ನಾಯ್ಕ ರವಿಶೇಟ್ ಜಯಾ ಶೇಟ್ ಕೃಷ್ಣಾನಂದ ಭಟ್ಟ ಉಪ್ಲೆ ಉಪಸ್ಥಿತರಿದ್ದರು