ಜನಸಾಮಾನ್ಯರಿಗೆ ಭದ್ರತೆ ಇಲ್ಲ ಎಂದು ಸಾಮಾನ್ಯರು ಆತಂಕದಲ್ಲಿದ್ದರೆ. ಜನಪ್ರತಿನಿಧಿಗಳಿಗೂ ಭದ್ರತೆ ಇಲ್ಲ ಎನ್ನುವುದು ಸಾಬೀತಾಗತೊಡಗಿದೆ.
ಇದಕ್ಕೆ ತಾಜಾ ಉದಾಹರಣೆ ಕುಮಟಾ ಶಾಸಕ ದಿನಕರ ಶೆಟ್ಟಯವರ ಮನೆಯಲ್ಲಿಯೇ ಕಳ್ಳತನದ ಪ್ರಯತ್ನ ,ಎಡಬಿಡದ ಸಾರ್ವಜನಿಕ ಕೆಲಸಗಳಲ್ಲಿ ನಿರತರಾಗಿರುವ ಶಾಸಕರು ತಮ್ಮ ಕುಟುಂಬದೊಂದಿಗೆ ಮಗಳ ಮನೆಗೆ ಹೊರಟರೆ ,ಆ ಸಮಯವನ್ನೆ ಸದ್ವಿನಿಯೋಗ ಮಾಡಿಕೊಂಡ ಕಳ್ಳರು ದಿನಕರ ಶೆಟ್ಟಿಯವರ ಮನೆಯನ್ನೇ ಜಾಲಾಡಿದ್ದಾರೆ .ಬೆಲೆ ಬಾಳುವ ಯಾವುದೇ ವಸ್ತುಗಳು ಕೈಗೆ ಸಿಗದಿದ್ದಾಗ ಬಂದ ದಾರಿಗೆ ಸುಂಕವಿಲ್ಲ ಎಂದು ತೆರಳಿದ್ದಾರೆ ,ಮನೆಬಿಟ್ಟು ಕೆಲವುದಿನಗಳ ಕಾಲ ದೂರ ಹೋಗುವಾಗ ಕಳ್ಳರ ಬಗ್ಗೆ ಎಚ್ಚರವಿರಲಿ ಎಂಬ ಕಿವಿಮಾತನ್ನ ದಿನಕರ ಶೆಟ್ಟಿಯವರಿಗೆ ರವಾನಿಸಿದ್ದಾರೆ.
ವಿಚಿತ್ರ ಎಂದರೆ ಶಾಸಕರ ಮನೆಯಲ್ಲಿರುವ ಸಿಸಿ ಕೇಮರಾ ಕಾರ್ಯ ನಿರ್ವಹಿಸಿಲ್ಲ ,ಒಬ್ಬ ಪೋಲಿಸ್ ಪೇದೆ ಇದ್ದರು ಆತನ ಅನುಪಸ್ಥಿತಿಯನ್ನ ನೋಡೆ ಕೈ ಚಳಕ ತೋರಿಸಿದ್ದಾರೆ .ಈ ಕುರಿತು ತನಿಖೆ ನಡೆಯುತ್ತಿದೆ ಸತ್ಯಾಂಶ ಹೊರಬರಬೇಕಿದೆ.